ನ್ಯೂಸ್

ದೀಪಾ ಅಕಾಡೆಮಿ ಬೆಂಗಳೂರು ತಂಡ ಚಾಂಪಿಯನ್

ಉತ್ತಮ ಪ್ರದರ್ಶನ ನೀಡಿದ ದೀಪಾ ಅಕಾಡೆಮಿ ಬೆಂಗಳೂರು ತಂಡ ಬ್ಲೈಂಡ್ ಗರ್ಲ್ಸ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಆವೃತ್ತಿಯ ಹೆರಿಟೇಜ್ ಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ನಗರದ ನಿರಮಯ ಫೌಂಡೇಷನ್, ಸ್ವಚ್ಛಂದ ಗುಂಪು ಮತ್ತು ಸುರಕ್ಷಾ ಫೌಂಡೇಷನ್ ಸಹಯೋಗದಲ್ಲಿ ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿ ಭಾನುವಾರ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಂತೆಯೇ ಮೈಸೂರಿನ ನಿರಮಯ ತಂಡದ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಪಂದ್ಯಾವಳಿಗೆ ಶಾಸಕ ಶ್ರೀವತ್ಸ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿಶೇಷಚೇತನರಲ್ಲಿಂುೂ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಿ ಇಂತಹದೊಂದು ಕ್ರೀಡಾ ಚಟುವಟಿಕೆ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.

ವಿಶೇಷಚೇತನರಿಗೆ ಕ್ರೀಡಾ ಚಟುವಟಿಕೆ ಅತ್ಯವಶ್ಯಕವಾಗಿದೆ. ಇದಕ್ಕಾಗಿ ಸಂಘಟನೆಗಳು ಒಗ್ಗೂಡಿ ಇಂತಹದೊಂದು ಅರ್ಥಪೂರ್ಣ ಅಪರೂಪದ ಕಾಂರ್ುಕ್ರಮ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದಕ್ಕೆ ಅಭಿನಂದನೆ ತಿಳಿಸಿದರು. ಇಲ್ಲಿ ಸೋಲು-ಗೆಲುವು ಮುಖ್ಯವಾಗುವುದಿಲ್ಲ. ಎಲ್ಲರೂ ಸಂತಸದಿಂದ ಪಾಲ್ಗೊಂಡು ಸಂಭ್ರಮಿಸಿ, ನಿಮ್ಮ ಚಟುವಟಿಕೆಂು ಸಂಭ್ರಮ ಎಲ್ಲರಲ್ಲೂ ಖುಷಿತರಿಸಲಿದೆ. ಅಂಗವೈಕಲ್ಯತೆಂುನ್ನು ಮೆಟ್ಟಿನಿಂತು ಸಾಧನೆ ವಾಡಲು ಇಂತಹ ಚಟುವಟಿಕೆಗಳು ಪೂರಕ ಆಗಲಿವೆ ಎಂದು ಹೇಳಿದರು.

ಆದಿತ್ಯ ಆಸ್ಪತ್ರೆಯ ಡಾ.ಎನ್.ಚಂದ್ರಶೇಖರ, ಇಕ್ಯೂಲೈಸರ್‌ನ ಮುಖ್ಯಸ್ಥ ಭಾಸ್ಕರ್ ಕಳಲೆ, ಭಾರತೀಯ ಅಂಧ ಕ್ರಿಕೆಟರ್ ಲೋಕೇಶ್, ನಿರಮಯ ಫೌಂಡೇಷನ್ ಸಂಸ್ಥಾಪಕಿ ಆರ್.ರಕ್ಷಿತಾ ಇತರರಿದ್ದರು. ಪಂದಾವಳಿಯಲ್ಲಿ ನಿರಮಯ, ರಂಗರಾವ್ ಶಾಲೆ, ದೀಪಾ ಅಕಾಡೆಮಿ, ಸ್ನೇಹ ಅಕಾಡೆಮಿ ಮಹಿಳಾ ತಂಡಗಳು ಭಾಗವಹಿಸಿದ್ದವು.