ನಿಪ್ಪಾಣಿ: ಯೋಗಾಭ್ಯಾಸವು ನಮ್ಮ ದೇಶದ ಸಂಸ್ಕೃತಿಯಾಗಿದ್ದು, ನಿತ್ಯ ಯೋಗಾಸನ ಮಾಡುವುದರಿಂದ ಹಲವು ರೋಗಗಳಿಂದ ದೂರವಿರುತ್ತೇವೆ ಎಂದು ಪತಂಜಲಿ ಯೋಗಪೀಠದ ಯೋಗಾಚಾರ್ಯ ಭವರಲಾಲ್ ಆರ್ಯ ಹೇಳಿದರು.
ಸ್ಥಳೀಯ ಪತಂಜಲಿ ಯೋಗ ಸಮಿತಿಯ ಸ್ಥಳೀಯ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆರೋಗ್ಯ ಪಡೆಯಲು ಯೋಗಾಸನ ಅವಶ್ಯ. ಮನಸ್ಸು ಏಕಾಗ್ರತೆಯಿಂದಿರಲು ಮತ್ತು ಶರೀರ ಸದೃಢವಾಗಿರಲು ಪ್ರತಿಯೊಬ್ಬರು ಯೋಗಾಸನ ಮಾಡಬೇಕು ಎಂದರು.
ಪತಂಜಲಿ ಯೋಗಪೀಠದ ಹರಿದ್ವಾರದ ಪ್ರಭಾರಿ ಪರಮಾರ್ಥದೇವ ಸ್ವಾಮೀಜಿ ಮತ್ತು ಯೋಗಾಚಾರ್ಯ ಭವರಲಾಲ್ ಆರ್ಯ ಪ್ರಾತ್ಯಕ್ಷಿಕೆ ಸಹಿತ ಯೋಗಾಸನ ತಿಳಿಸಿಕೊಟ್ಟರು.
ಸ್ಥಳೀಯ ವಿರೂಪಾಕ್ಷಲಿಂಗ ಸಮಾಽಮಠದ ಪ್ರಾಣಲಿಂಗ ಸ್ವಾಮೀಜಿ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಸದಸ್ಯ ಜಯವಂತ ಭಾಟಲೆ, ಪ್ರಸನ್ನಕುಮಾರ ಗುಜರ, ಪ್ರಣವ ಮಾನವಿ, ವಿಜಯ ಟವಳೆ, ದತ್ತಾತ್ರೇಯ ಜೋತ್ರೆ, ಸುರೇಶ ಶೆಟ್ಟಿ, ಸ್ನೇಹಲ್ ಪಾಟೀಲ, ಆಶಾ ತಿಳವೆ, ದಶರಥ ಕುಂಭಾರ, ಸುಪ್ರಿಯಾ ಭುಸಾರಿ, ಭೂಪೇಂದ್ರ ಕುರಬೆಟ್ಟಿ, ರವಿ ಖೋತ, ಅನಿಲ ಶ್ರೀಖಂಡೆ ಇತರರಿದ್ದರು.