ನ್ಯೂಸ್

ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯ ಜನಕ್ಕೆ ರಾಜ್ಯ ಸರ್ಕಾರ ದ್ರೋಹ ಬಗೆದಿದೆ / ರಾಜ್ಯ ಸರ್ಕಾರ ಯಾವ ಕ್ಷಣದಲ್ಲಾದರೂ ಬೀಳಬಹುದು / ಸಂಸದ ಎಂ.ಮಲ್ಲೇಶ್‌ಬಾಬು

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದಲ್ಲಿ ದಿನಬಳಕೆ ವಸ್ತುಗಳು ಬೆಲೆ ಏರಿಕೆ ಮಾಡಿ, ದ್ರೋಹ ಬಗೆದಿರುವ ರಾಜ್ಯ ಸರ್ಕಾರ ಯಾವ ಕ್ಷಣದಲ್ಲಾದರೂ ಬೀಳಬಹುದು ಎಂದು ನಾಡಿದ ಜನತೆ ಕಾಯುತ್ತಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಭವಿಷ್ಯ ನುಡಿದರು.

ಕೋಲಾರ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ೧೦ ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಗ್ಯಾರೆಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ದಿನಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ. ಎರಡು ವರ್ಷದಲ್ಲೇ ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ಆವರಿಸಿರುವುದರಿಂದ ರಾಜ್ಯದ ಜನತೆ ರಾಜ್ಯ ಸರ್ಕಾರ ಯಾವಾಗ ಬೀಳುತ್ತದೆ ಎಂದು ಕಾಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

ಹೆಣ್ಣು ಮಕ್ಕಳಿಗೆ ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ, ಬೆಲೆ ಏರಿಕೆ ಮಾಡುವ ಮೂಲಕ ಮತ್ತೊಂದು ಕೈಯಲ್ಲಿ ಗಂಡಸರಿAದ ಕಿತ್ತುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ನಿಮಗೆ ಯಾರು ಉತ್ತಮರೋ ಅವರನ್ನು ನೋಡಿ ಮತ ನೀಡಿ. ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿಕೂಟ ಗಟ್ಟಿಯಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಕೂಟದಲ್ಲಿ ಯಾವುದೇ ಭೀನ್ನಾಭಿಪ್ರಾಯಗಳಿಲ್ಲ. ಈ ಬಗ್ಗೆ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ. ಮೈತ್ರಿ ಕೂಟ ಚೇನ್ನಾಗಿಲ್ಲ ಎನ್ನುವುದು ಮಾಧ್ಯಮಗಳ ಸೃಷ್ಟಿಯಷ್ಟೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಬೆಲೆ ಏರಿಕೆ ಕುರಿತು ಅವರವರ ಹಂತದಲ್ಲಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ವಿಷಯ ಒಂದೇ ಬಿಜೆಪಿ ಅವರು ಬೆಲೆ ಏರಿಕೆ ಕುರಿತು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಸಹ ಬೆಲೆ ಏರಿಕೆ ಖಂಡಿಸಿ ಮುಂದಿನ ಶನಿವಾರ ೫೦ ಸಾವಿರಕ್ಕೂ ಹೆಚ್ಚು ಮಂದಿ ಒಟ್ಟಿಗೆ ಸೇರಿ ಬೃಹತ್ ಪ್ರತಿಭಟನೆ ಜೆಡಿಎಸ್ ವತಿಯಿಂದ ರಾಜ್ಯ ಸರ್ಕಾರದ ವಿರುದ್ದ ನಡೆಸಲಾಗುತ್ತಿದೆ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಬೆಲೆ ಏರಿಕೆ ಬಿಟ್ಟಿ ಭಾಗ್ಯಗಳ ಪ್ರತಿಫಲದಿಂದ ರಾಜ್ಯದ ಜನತೆ ಅನುಭವಿಸುತ್ತಿರುವ ನರಕವಾಗಿದೆ. ರಾಜ್ಯ ಸರ್ಕಾರ ಲೋಟ ಇಟ್ಟು ಚೆಂಬು ಹೊಡೆಯುವ ಕೆಲಸ ಮಾಡುತ್ತಿದೆ. ಗ್ಯಾರೆಂಟಿಗಳ ಅವಶ್ಯಕತೆ ನಮಗೆ ಬೇಕಿಲ್ಲ ಎಂದು ರಾಜ್ಯದ ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಕೈಗೆ ಕೆಲಸ ಕೊಡಿ, ಅದು ಬಿಟ್ಟು ಬಿಟ್ಟಿ ಬ್ಯಾಗ್ಯಗಳನ್ನು ನೀಡಿ ನಮ್ಮನ್ನ ಸೋಂಬೇರಿಗಳನ್ನಾಗಿ ಮಾಡಬೇಡಿ ಎಂದು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ವಿದ್ಯುತ್, ಹಾಲು, ನೊಂದಣಿ, ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯ ಹೊರೆ ರಾಜ್ಯದ ಜನತೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿರುವುದು ಕಡಿಮೆಯಾಗುವ ಸೂಚನೆಗಳಿಲ್ಲ. ಆದರೆ ಇನ್ನಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಎಂದು ರಾಜ್ಯ ಸರ್ಕಾರದ ವಿರುದ್ದ ಕಟುವಾಗಿ ಟೀಕಿಸಿದರಲ್ಲದೇ ಇದರ ಪ್ರತಿಫಲವನ್ನು ಮುಂದಿನ ೨೦೨೮ ರ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೇಸ್ ಎದುರಿಸಲಿದೆ ಎಂದರು.

ಜೆಡಿಎಸ್ ಮುಖಂಡರಾದ ವಡಗೂರು ರಾಮು, ಬಡಕನಹಳ್ಳಿ ನಟರಾಜ್, ನಗರಸಭೆ ಸದಸ್ಯ ರಾಕೇಶ್, ಶ್ರೀರಾಮ ಸೇನೆಯ ರಮೇಶ್‌ರಾಜು ಮುಂತಾದವರು ಇದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೧ : ನಗರದ ಎಂ.ಬಿ.ರಸ್ತೆಯಲ್ಲಿ ಏರ್ಪಡಿಸಲಾಗಿರುವ ರಾಮೋತ್ಸವ ಕಾರ್ಯಕ್ರಮದಲ್ಲಿ ಸಂಸದ ಮಲ್ಲೇಶ್‌ಬಾಬು ಭಾಗವಹಿಸಿರುವುದು. ಜೆಡಿಎಸ್ ಮುಖಂಡರಾದ ವಡಗೂರು ರಾಮು, ಬಣಕನಹಳ್ಳಿ ನಟರಾಜ್, ಸಿಎಂಆರ್ ಶ್ರೀನಾಥ್ ಮುಂತಾದವರು ಇದ್ದರು.