format: 0; filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 1; delta:1; bokeh:1; module: photo;hw-remosaic: false;touch: (-1.0, -1.0);sceneMode: 13107200;cct_value: 0;AI_Scene: (-1, -1);aec_lux: 79.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 41; 
ನ್ಯೂಸ್

ದಾವಣಗೆರೆ ರಸ್ತೆ ಆರ್‌ಒಬಿ ನಿರ್ಮಾಣಕ್ಕೆ ಟೆಂಡರ್ ಒಂದು ವಾರದ ಗಡುವು

ಚಿತ್ರದುರ್ಗ: ನಗರದಿಂದ ದಾವಣಗೆರೆಗೆ ತೆರಳುವ ರಸ್ತೆ ಮಾರ್ಗ(ರೈಲ್ವೆ ಸ್ಟೇಷನ್‌ಬಳಿ)ಆರ್‌ಒಬಿ ನಿರ್ಮಾಣ ಕಾಮಗಾರಿಗೆ ಒಂದು ವಾರದ ಒಳಗಾಗಿ ಟೆಂಡ ರ್ ಕರೆಯಬೇಕೆಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈಲ್ವೆ ಗೇಟ್ ಸಂಖ್ಯೆ 22ರ ಈ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸಂಸದ ಗೋವಿಂದ ಕಾರಜೋಳ ಸುಗಮ ಸಂಚಾರಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.ದಿನಕ್ಕೆ ಕನಿಷ್ಠ 30 ಬಾರಿ ಗೇಟ್ ಬಂದ್ ಆಗುತ್ತಿದ್ದು,ಹಲವು ಬಾರಿ ಆ್ಯಂಬುಲೆನ್ಸ್‌ಗಳ ಸಹಿತ ವಾಹನಗಳ ಸಂಚಾರಕ್ಕೆ ಅಡ್ಡಿ ಆಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೇ ಉಪ ಮುಖ್ಯ ಇಂಜಿನಿಯರ್ ನಿಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸೋಮಣ್ಣ, ಇಲ್ಲಿ ಆರ್‌ಒಬಿ ನಿರ್ಮಾಣಕ್ಕೆ ಅನುದಾನವನ್ನೂ ಒದಗಿಸಿದ್ದರೂ ಕಾಲಹರಣ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಒಂದು ವಾರದ ಒಳಗಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟೇಶ್ ನಾಯಕ್ ಹೇಳಿದರು.

ಬಳಿಕ ಸಚಿವರು ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ರೈಲ್ವೇ ಹಿರಿಯ ಅಧಿಕಾರಿಗಳಾದ ಅಜಯ್ ಶರ್ಮಾ,ಮುದಿತ್‌ಮಿತ್ತ ಲ್,ಎಸಿ ಮೆಹಬೂಬ್ ಜಿಲಾನಿ ಖುರೇಷಿ ಇತರರು ಇದ್ದರು.