ನ್ಯೂಸ್

ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಟ್ಟಿಗೆ ಪೂಜೆ ಮಾಡುವ ಮೂಲಕ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ, ಕುಸ್ತಿಪಟುಗಳಿಗೆ ಶುಭ ಹಾರೈಸಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ದಸರಾ ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎಲ್.ನಾಗೇಶ್, ಅಧ್ಯಕ್ಷ ಪೈ.ರಮೇಶ್, ಕಾರ್ಯಾಧ್ಯಕ್ಷ ನಾಗೇಂದ್ರಪ್ಪ, ಕಾರ್ಯದರ್ಶಿಗಳಾದ ರಘು, ಮಲ್ಲಿಕಾರ್ಜುನ್, ಹಿರಿಯ ಪೈಲ್ವಾನರಾದ ಅಮೃತ್ ಪುರೋಹಿತ್, ಶಿವಮಲ್ಲು, ನಂಜನಗೂಡು ಸಿದ್ದರಾಜು, ಹಿನಕಲ್ ವೆಂಕಟೇಶ್, ಗಂಗಾಧರ್, ಬನ್ನೂರು ರವಿ, ಮೂರ್ತಿ, ಅನಂತು ಸೇರಿದಂತೆ ಇತರರಿದ್ದರು.