filter: 0; fileterIntensity: 0.0; filterMask: 0; captureOrientation: 0; hdrForward: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 41; 
ನ್ಯೂಸ್

ದಶಮಾನೋತ್ಸವ ಕಾರ್ಯಕ್ರಮ

ದಟ್ಟಗಳ್ಳಿ ಗ್ರೀನ್ ಫೌಂಡೇಷನ್ ವತಿಯಿಂದ ದಶಮಾನೋತ್ಸವ ಅಂಗವಾಗಿ ಅ.26ರಂದು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ದಟ್ಟಗಳ್ಳಿ ಜೆ ಬ್ಲಾಕ್ ಡಿಜಿಎಫ್ ವೃತ್ತದ ಬಳಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಂ.ಎನ್.ನಟರಾಜ್ ತಿಳಿಸಿದರು.

ಬೆಳಗ್ಗೆ 9 ರಿಂದ ಆಹಾರ ಮೇಳ, ಆರೋಗ್ಯ ತಪಾಸಣೆ ಮೊದಲಾದವು ನಡೆಯಲಿವೆ. ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮಾರಂಭ ಉದ್ಘಾಟಿಸುವರು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಸರ ಸ್ನೇಹಿ ಬ್ಯಾಗ್ ವಿತರಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಉಚಿತ ಸಸಿ ವಿತರಿಸುವರು, ಡಾ.ಯತೀಂದ್ರ ಸಿದ್ದರಾಮಯ್ಯ ಪೌರ ಕಾರ್ಮಿಕರನ್ನು ಸನ್ಮಾನಿಸುವರು, ಶಾಸಕ ಕೆ.ಹರೀಶ್‌ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಅತಿಥಿಗಳಾಗಿ ಭಾಗವಹಿಸುವರು. ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಪಾಲಿಕೆ ವಲಯ ಕಚೇರಿ 6ರ ವಲಯ ಆಯುಕ್ತ ಎಂ.ಸಂದೀಪ್, ವಲಯ ಕಚೇರಿ 3ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ವೇದಿಕೆಯಲ್ಲಿರುವರು. ಪ್ರಾಚಾರ್ಯ ಎನ್.ಎಂ.ಶಿವಪ್ರಕಾಶ್ ಸ್ವಚ್ಛತೆ ಹಾಗೂ ಪರಿಸರ ಕುರಿತು ಮಾತನಾಡುವರು. ಈ ಟ್ರಸ್ಟ್ ಇದುವರೆಗೆ ಸಾವಿರಾರು ಗಿಡಗಳನ್ನು ಪ್ರದೇಶದಲ್ಲಿ ನೆಟ್ಟು, ಪೋಷಿಸಿ ಹಸಿರು ಪ್ರದೇಶವನ್ನಾಗಿಸಿದೆ ಎಂದರು.

ಹಿರಿಯ ಬ್ಯಾಡ್ಮಿಂಟನ್ ಕ್ರೀಡಾಪಟು ಲೆನ್ಸಿ ಜಾನ್, ನಾಗೇಂದ್ರ ಕುಮಾರ್, ಎಚ್.ಟಿ.ನಟರಾಜ್, ಆರ್.ಕೆ.ರಾಜು, ರಮೇಶ್ ಹಾಗೂ ಪುರುಷೋತ್ತಮ್ ಮೊದಲಾದವರು ಇದ್ದರು.