ಪಿರಿಯಾಪಟ್ಟಣ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಣಿಪುರದಲ್ಲಿ ಅಮಾಯಕ ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ವರದಿಯಾಗುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಮಾಜಿ ಸಚಿವ ಆರಗ ಜ್ಞಾನೇಂದ್ರ ವರ್ಣನಿಂದನೆ ಮಾಡಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಆಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಕುಂಇ ಅಹಮದ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯತಿ ಮಾಜಿ ಸದಸ್ಯ ಹಾಗೂ ದಲಿತ ಮುಖಂಡರಾದ ಐಲಾಪುರ ರಾಮು ಮಾತನಾಡಿದರು. ದಸಂಸ ಮುಖಂಡರಾದ ಸಿ.ತಮ್ಮಣ್ಣಯ್ಯ, ಸಿ.ಎಸ್.ಜಗದೀಶ್, ಶಿವದೇವ್, ಗೋಪಾಲ್, ಶಿವಣ್ಣ, ಹೊನ್ನೂರಯ್ಯ, ರಾಜಣ್ಣ, ಈರಾಜ್, ಚನ್ನಬಸವಣ್ಣ, ಅಶೋಕ್, ರಾಜು, ಚಿಕ್ಕ ಮಹದೇವ್, ರತ್ನಮ್ಮ, ಕುಮಾರ್, ಚೆಲುವರಾಜ್, ಕಾಂತರಾಜ್, ಗಿರೀಶ್, ಮಹದೇವ್, ರಮಣಯ್ಯ, ಕಾಮರಾಜ್, ಮೂರ್ತಿ, ಸೋಮಶೇಖರ್, ಲಕ್ಷ್ಮಣ, ಜಗದೀಶ್, ರವಿ, ಚೌತಿ ಮಲ್ಲಣ್ಣ, ಭೈರವ, ಹರೀಶ್, ಮಂಜು, ದೇವೇಂದ್ರ, ಮಂಜು, ಶಿವರಾಜ್, ಸುಭಾಷ್, ಪ್ರಕಾಶ್, ಸೋಮಶೇಖರ್, ವಿಜೇಂದ್ರ ಇತರರು ಇದ್ದರು.