ನ್ಯೂಸ್

ದರ್ಶನ್‌ರಿಂದ ತಲೆ ತಗ್ಗಿಸುವಂತಾಗಿದೆ

ಚಿತ್ರದುರ್ಗ: ದರ್ಶನ್‌ರಿಂದ ಚಿತ್ರರಂಗ ತಲೆ ತಗ್ಗಿಸುವಂತಾಗಿದೆ. ಅದಕ್ಕಾಗಿಯೇ ರೇಣುಕಸ್ವಾಮಿ ಅವರ ಕುಟುಂಬವನ್ನು ಕ್ಷಮೆಯಾಚಿಸಲು ಕೆಎಫ್‌ಸಿಸಿ ಪದಾಧಿಕಾರಿಗಳು ಬಂದಿದ್ದೇವೆ ಎಂದು ನಟ, ನಿರ್ಮಾಪಕ ಜಯಸಿಂಹ ಮುಸೂರಿ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಒಳಗೆ ಏನು ನಡೆದಿದೆ ಎಂಬುದು ನಮಗೆ ಗೊತ್ತಿಲ್ಲ. ನಿರ್ಮಾಪಕರ ಹಾಗೂ ಕಲಾವಿದರ ಸಂಘದ ಅಭಿಪ್ರಾಯ ಪಡೆದು, ಕೂಲಂಕುಷವಾಗಿ ಚರ್ಚಿಸಿದ ನಂತರ ಕ್ರಮವಹಿಸಲಿದ್ದೇವೆ ಎಂದರು.

ದರ್ಶನ್‌ರ ಮೂರ್ನಾಲ್ಕು ಸಿನಿಮಾಗಳಿಗೆ ನಿರ್ಮಾಪಕರು ಈಗಾಗಲೇ ಹಣ ಸುರಿದಿದ್ದಾರೆ. ಒಂದೆರಡು ಅರ್ಧ ಚಿತ್ರೀಕರಣವಾಗಿದೆ. ಅವರ ಸಮಸ್ಯೆ ಕೂಡ ಆಲಿಸಬೇಕಿದೆ. ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ. ಆನಂತರ ಚಿತ್ರರಂಗ ಮುಂದಿನ ನಡೆ ಪ್ರಕಟಿಸಲಿದೆ ಎಂದರು.