ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ನಟ ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟ ದರ್ಶನ್ ರಾಜಕೀಯದ ಬಗ್ಗೆ ಅವಧೂತ ಅರ್ಜುನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಟ ದರ್ಶನ್ ರಾಜಕೀಯಕ್ಕೆ ಬರುತ್ತಾರೆ. ದರ್ಶನ್‌ಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ. ಅವರು ಯಾರ ಮನೆ ಬಳಿ ಹೋಗಲ್ಲ, ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ ಎಂದು ಗುರುವಾರ ಭವಿಷ್ಯ ನುಡಿದಿದ್ದಾರೆ.
ಹಾಗೆಯೇ ನಟ ದರ್ಶನ್ ಬಿಡುಗಡೆ ವಿಚಾರ ಕೇಳಿ ಖುಷಿಯಾಯಿತು. ದರ್ಶನ್ ಸಹೋದರ ದಿನಕರ್‌ಗೆ ಕರೆ ಮಾಡಿದ್ದೆ. ಸ್ವೀಟ್ ತೆಗೆದುಕೊಂಡು ಬರಲು ಹೇಳಿದ್ದೇನೆ ಎಂದು ಅವಧೂತ ಗುರೂಜಿ ತಿಳಿಸಿದ್ದಾರೆ.