ನ್ಯೂಸ್

ದತ್ತ ಪೀಠದಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಆರಂಭ

ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ನಗರದ ಅವಧೂತ ದತ್ತ ಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸೋಮವಾರದಿಂದ ವಿಶೇಷ ಪೂಜಾ ಕೈಂಕರ್ಯ, ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಡಿ.18ರವರೆಗೆ ನಡೆಯಲಿದೆ.

ಡಿ.11ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಗೀತಾ ಜಯಂತಿ ನಡೆಯಲಿದ್ದು, ನಾದ ಮಂಟಪದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ ಆಯೋಜಿಸಲಾಗಿದೆ. ಡಿ.12 ಬೆಳಗ್ಗೆ 7 ಗಂಟೆಯಿಂದ ಅಹೋರಾತ್ರಿ ಅಖಂಡ ಹನುಮಾನ ಚಾಲೀಸಾ ಪಾರಾಯಣ ಜರುಗಲಿದೆ. ಡಿ.13 ಬೆಳಗ್ಗೆ 7 ಗಂಟೆಗೆ ಶ್ರೀ ಹನುಮ ಜಯಂತಿ ಪ್ರಯುಕ್ತ ಕಾರ್ಯ ಸಿದ್ಧಿ ಹನುಮಂತನಿಗೆ ಅಭಿಷೇಕ, 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, 10ಕ್ಕೆ ಶ್ರಿ ಚಕ್ರಪೂಜೆ, ಪುಣ್ಯ ಸ್ಮರಣೆ, ಅನಘ ವ್ರತ, 11 ಗಂಟೆಗೆ ಶ್ರೀ ಹನುಮ ಜಯಂತಿ ಪೂಜೆ. ಸಂಜೆ 5 ಕ್ಕೆ ಪಲ್ಲಕ್ಕಿ ಉತ್ಸವ, ಸಂಜೆ 7ಕ್ಕೆ ಹನುಮಾನ್ ಭಜನೆ ನಡೆಯಲಿದೆ.

ಡಿ.14 ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಚಕ್ರಪೂಜಾ, ಶ್ರೀ ದತ್ತಾತ್ರೇಯ ಹೋಮದ ಪೂರ್ಣಾಹುತಿ, ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಕ್ಷೀರಾಭಿಷೇಕ ನಡೆಯಲಿದೆ. ಬೆಳಗ್ಗೆ 10 ಕ್ಕೆ ಅಖಿಲ ಭಾರತ ಜ್ಞಾನ ಬೋಧ ಸಭಾ ಸಮ್ಮೇಳನ, ಬೆಳಗ್ಗೆ 11 ಗಂಟೆಗೆ ಅನಘ ವ್ರತ, ಸಂಜೆ 5ಕ್ಕೆ ರಥೋತ್ಸವ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಡಿ. 15 ಬೆಳಗ್ಗೆ 7 ಗಂಟೆಗೆ ಪೌರ್ಣಮಿ, ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ಪವಮಾನ ಹೋಮ ಮತ್ತು ದತ್ತಾತ್ರೇಯ ವಜ್ರ ಮಂತ್ರ ಹೋಮ, ಬೆಳಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ, ಶ್ರೀ ಚಕ್ರ ಪೂಜೆ ಮತ್ತು ಪೂರ್ಣಾಹುತಿ ಬೆಳಗ್ಗೆ 10 ಗಂಟೆಗೆ ಶ್ರೀ ದತ್ತಾತ್ರೇಯ ಸ್ವಾಮಿಗೆ ಭಕ್ತರಿಂದ ಸಹಸ್ರ ಕಳಶ ತೈಲಾಭಿಷೇಕ, ಕೊಚ್ಚಿ ಆಶ್ರಮ ಭಜನಾ ತಂಡದಿಂದ ಶ್ರೀ ದತ್ತಾತ್ರೇಯ ಸ್ವಾಮಿ ನಾಮ ಸಂಕೀರ್ತನೆ, ಬೆಳಗ್ಗೆ 11 ಗಂಟೆಗೆ ಅನಘ ವ್ರತ ನಡೆಯಲಿದೆ. ಸಂಜೆ 7ಕ್ಕೆ ಸಪ್ತರ್ಷಿ ಸರೋವರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಗೆ ತೆಪ್ಪೋತ್ಸವ, ರಾತ್ರಿ 8 ಗಂಟೆಗೆ ನಾದ ಮಂಟಪದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಗೆ ಕಾಕಡಾರತಿ, ಡಿ.16 ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ, ಮಂತ್ರ ಉಪದೇಶ, ಬೆಳಗ್ಗೆ 8 ಗಂಟೆಗೆ ಚಂಡಿ ಹೋಮ, ಬೆಳಗ್ಗೆ 9 ಗಂಟೆಗೆ ಶ್ರೀ ಚಕ್ರ ಪೂಜೆ, ಸಂಜೆ 4ಕ್ಕೆ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣ, 17 ರಂದು ಬೆಳಗ್ಗೆ 8 ಗಂಟೆಗೆ ದೇವಿ ಹೋಮ, ಸಂಜೆ 6 ಗಂಟೆಗೆ ಅಭಿಷೇಕ, ಶ್ರೀಚಕ್ರ ಪೂಜಾ ಕಾರ್ಯಕ್ರಮ ನಡೆಯಲಿದೆ.

ಡಿ.16, 17 ಹಾಗೂ 18 ರಂದು ಸಂಜೆ ಸಂಜೆ 6 ಗಂಟೆಗೆ ಶ್ರೀ ದತ್ತಾತ್ರೇಯ ಅವರ ಕುರಿತು ಪಾಗಡ ಪ್ರಕಾಶ್‌ರಾವ್ ಅವರಿಂದ ಕನ್ನಡದಲ್ಲಿ ಪ್ರವಚನ ಆಯೋಜಿಸಲಾಗಿದೆ. ಈ ಎಲ್ಲ ಪೂಜಾ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಭಾಗವಹಿಸಬೇಕೆಂದು ಅವಧೂತ ದತ್ತ ಪೀಠದ ಪ್ರಕಟಣೆ ಕೋರಿದೆ.