ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಲಗಿದ್ದ ದಂಪತಿಗಳಿಬ್ಬರು ಬೆಂಕಿಗಾಹುತಿಯಾದ ಘಟನೆ ಗುರಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಸೋಮವಾರ ಬೆಳ್ಳಂ ಬೆಳಿಗ್ಗೆ ನಡೆದಿದೆ.
ಬಟ್ಟೆ ಅಂಗಡಿಗೆ ಹತ್ತಿಕೊಂಡ ಬೆಂಕಿ ಮನೆಗೂ ವ್ಯಾಪಿಸಿದೆ. ಕೋಣೆಯೊಳಗೆ ಮಲಗಿದ್ದ ಕೆ.ಬಿ.ರಾಘವೇಂದ್ರ (40), ಪತ್ನಿ ಶಿಲ್ಪಾ ರಾಘವೇಂದ್ರ (35) ಬೆಂಕಿಗೆ ಆಹುತಿಯಾಗಿದ್ದಾರೆ.
ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ಸೋಮವಾರ ನಸುಕಿನ 3 ಗಂಟೆಗೆ ನಡೆದಿದೆ. ಸ್ಥಳೀಯರು ಬೆಂಕಿ ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲು. ಮೃತ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ವಿಧಿಯ ಕ್ರೂರ ಆಟಕ್ಕೆ ಅನಾಥರಾಗಿದ್ದಾರೆ. ಘಟನೆಯಿಂದ ಇಡೀ ಯಾದಗಿರಿ ಜಿಲ್ಲೆ ಬೆಚ್ವಿ ಬಿದ್ದಿದೆ