ನ್ಯೂಸ್

ದಂಡಿನ ಮಾರಮ್ಮ ದೇವಿಗೆ ಬೆಳ್ಳಿ ಕಿರೀಟ ಧಾರಣೆ

ಚಾಮರಾಜನಗರ: ಸಮೀಪದ ಮಲ್ಲಯ್ಯನಪುರ ಗ್ರಾಮದಲ್ಲಿರುವ ಗ್ರಾಮ ದೇವತೆ ಶ್ರೀದಂಡಿನ ಮಾರಮ್ಮದೇವಿಗೆ ಗ್ರಾಮದ ದಾನಿಯೊಬ್ಬರು ಶನಿವಾರ ಬೆಳ್ಳಿಯ ಕಿರೀಟವನ್ನು ತೊಡಿಸಿದರು.

ಸ್ವಗ್ರಾಮದ ನಿವೃತ್ತ ಶಿಕ್ಷಕ ದಿ.ವಿ.ರಾಮಯ್ಯ ಮತ್ತು ನಾಗಮ್ಮ ದಂಪತಿಗಳ ಸ್ಮರಣಾರ್ಥ ಅವರ ಪುತ್ರ ದೆಹಲಿಯ ರುರ‌್ಕಿಯಲ್ಲಿ ಭೂ ವಿಜ್ಞಾನಿಯಾಗಿರುವ ಡಾ. ಧರ್ಮರಾಜ್ ಮತ್ತು ಕುಟುಂಬದವರು ಗ್ರಾಮ ದೇವತೆಗೆ ಬೆಳ್ಳಿಕಿರೀಟವನ್ನು ನೀಡಿದರು.

ಈ ಹಿನ್ನೆಲೆಯಲ್ಲಿ ದೇವಿಗೆ ಬೆಳ್ಳಿ ಕಿರೀಟ ಧಾರಣೆ ಕಾರ್ಯಕ್ರಮ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ದೇವತೆ ದಂಡಿಮಾರಮ್ಮ ದೇವಿಗೆ ವಿಶೇಷ ಹೂವಿನ ಆಲಂಕಾರ ಮಾಡಿ ಬೆಳ್ಳಿ ಕಿರೀಟವನ್ನು ತೊಡಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅನ್ನ ಸಂತಾರ್ಪಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಳಿ ಕಿರೀಟ ದಾನಿಗಳಾದ ಡಾ.ಧರ್ಮರಾಜ್, ಮನೀಸ್, ಬಿಇಓ ಸೋಮಣ್ಣೇಗೌಡ, ಯ. ಎಂ.ಎನ್. ಮಹದೇವ್, ಅರ್ಚಕ ಮುದ್ದಯ್ಯ, ಗ್ರಾಮಸ್ಥರು ಇದ್ದರು.