ಬೀರೂರಿನ ತೋಟದ ಮನೆಯೊಂದರಲ್ಲಿ ಅಡಗಿದ್ದ ಹೆಬ್ಬಾವನ್ನು ಉರಗತಜ್ಞ ಸುರೇಶ್ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬೀಟ್ ಾರೆಸ್ಟರ್ ರಜಿತ್ ಮತ್ತು ಸಿದ್ದೇಶ್ ಇದ್ದರು. ---------- 
ನ್ಯೂಸ್

ತೋಟದ ಮನೆಗೆ ಬಂದ ಹೆಬ್ಬಾವು ಸೆರೆ

ಬೀರೂರು: ಪಟ್ಟಣ ಹೊರವಲಯದ ಬಾಕಿನಕೆರೆ ಸಮೀಪದ ತೋಟದ ಮನೆಯೊಂದರಲ್ಲಿ ಸೋಮವಾರ 8 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಸುರೇಶ್ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದರು.

ಕಾಂತರಾಜು ಎಂಬುವವರಿಗೆ ಸೇರಿದ ತೋಟದ ಮನೆ ಹೊರಾಂಗಣದಲ್ಲಿ ಕೋಳಿ ಕೂಡಿಹಾಕಲು ನಿರ್ಮಿಸಿದ್ದು ಕಬ್ಬಿಣದ ಶೆಡ್ ಕಡೆ ಸಾಗುತ್ತಿದ್ದ ಹೆಬ್ಬಾವು ಮಾಲೀಕನ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಬೀರೂರಿನ ಉರಗ ತಜ್ಞ ಸುರೇಶ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುರೇಶ್ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ನಂತರ ಅದನ್ನು ಬೀರೂರು ಪೊಲೀಸ್ ಠಾಣೆಗೆ ತಂದು ಪಿಎಸ್‌ಐ ಸಜಿತ್‌ಕುಮಾರ್‌ಗೆ ವಿಷಯ ತಿಳಿಸಿದ್ದಾರೆ. ಅವರು ಕಡೂರು ಅರಣ್ಯ ಬೀಟ್ ಾರೆಸ್ಟರ್ ರಜಿತ್ ಮತ್ತು ಸಿದ್ದೇಶ್‌ಗೆ ಹೆಬ್ಬಾವನ್ನು ಹಸ್ತಾಂತರಿಸಿದರು.