ನ್ಯೂಸ್

ತೋಟಗಾರಿಕಾ ಚಟುವಟಿಕೆಗೆ ಉತ್ತೇಜಿಸುವ ಕಾರ್ಯ

ಮೈಸೂರು: ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮದ ಭಾಗವಾಗಿ ಈಗಾಗಲೇ ತಮ್ಮ ಮನೆಗಳಲ್ಲಿ ಗಿಡ ನೆಟ್ಟು ಪೋಷಿಸುತ್ತಿದ್ದಾರೆ.

ಶಾಲೆಯಲ್ಲಿ ಹಸಿರು ಶಿಕ್ಷಣ ವಿಭಾಗದ ಮಾರ್ಗದರ್ಶನ ಪಡೆದು ಶಾಲಾ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳೇ ತರಕಾರಿಗಳನ್ನು ಬೆಳೆಯುತ್ತಿದ್ದು, ಸೋಮವಾರ ವಿದ್ಯಾರ್ಥಿಗಳು ತಾವು ಬೆಳೆದ ತರಕಾರಿಯನ್ನು ಮಾರಾಟ ಮಾಡುವ ಮೂಲಕ ಭವಿಷ್ಯತ್ತಿನಲ್ಲಿ ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಯು ಬದುಕಿನ ಮಹತ್ವದ ಭಾಗವಾಗುತ್ತದೆ ಎಂಬ ಸಂದೇಶ ರವಾನಿಸಿದರು.

ಮಕ್ಕಳು ಬೆಳೆದ ತರಕಾರಿಯನ್ನು ಸಂಸ್ಥೆಯ ಅಧ್ಯಕ್ಷ ಆರ್. ರಘು ಖರೀದಿಸುವ ಮೂಲಕ ತೋಟಗಾರಿಕಾ ಚಟುವಟಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.