ನ್ಯೂಸ್

ತೇಗದ ಮರಗಳ ಕಳವು / ಇಬ್ಬರು ಆರೋಪಿಗಳ ಬಂಧನ

ವಿಜಯವಾಣಿ ಸುದ್ದಿಜಾಲ ಕೆ.ಜಿ.ಎಫ್.

ಕೆ.ಜಿ.ಎಫ್. ತಾಲ್ಲೂಕು ಕ್ಯಾಸಂಬಳ್ಳಿ ಪೋಲಿಸರು ತೇಗದ ಮರಗಳ ಕಳುವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು ೩ ಲಕ್ಷ ರೂ.ಗಳ ಮೌಲ್ಯದ ೨೦ ತೇಗದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

ಕ್ಯಾಸಂಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ನಾಗಕುಪ್ಪ ಗ್ರಾಮದ ತಮ್ಮ ಜಮೀನಿನಲ್ಲಿ ಹಾಕಿದ್ದ ತೇಗ ಮರಗಳನ್ನು ಕಳ್ಳತನವಾಗಿರುವ ಬಗ್ಗೆ ಮನೋಹರ್ ಲಾಲ್ ಕ್ಯಾಸಂಬಳ್ಳಿ ಪೋಲಿಸ್ ಠಾಣೆಯಲ್ಲಿ ಆ.೧೦ ರಂದು ದೂರು ನೀಡಿದ್ದರು.

ಡಿವೈಎಸ್ಪಿ ಎಸ್.ಪಾಂಡುರAಗ ರವರ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ರವರ ನೇತೃತ್ವದಲ್ಲಿ ಪಿಎಸ್‌ಐ ಸಂಗಮೇಶ್ ಕೊಲ್ಹಾರ್, ಜಿ.ದೇವರಾಜು ಮತ್ತು ತಂಡದವರು ನಾಗಕುಪ್ಪ ಗ್ರಾಮದ ವಾಸಿ ಬಾಬು, ಚಿಂಚಾAಡ್ಲಹಳ್ಳಿ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ೩ ಲಕ್ಷ ರೂ.ಗಳ ಬೆಲೆ ಬಾಳುವ ೨೦ ತೇಗದ ಮರಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಟ್ರಾö್ಯಕ್ಟರ್ ಅನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಚಿತ್ರ ೧೬ ಕೆ.ಎಲ್.ಆರ್. ೦೨ : ವಶಪಡಿಸಿಕೊಂಡ ಮಾಲಿನೊಂದಿಗೆ ಕ್ಯಾಸಂಬಳ್ಳಿ ಪೊಲೀಸರು.