ವಿಜಯವಾಣಿ ಸುದ್ದಿಜಾಲ ಮಂಗಳೂರು
ತೆಲಂಗಾಣದ ಕಾಚೆಗುಡ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಾರದಲ್ಲಿ ಎರಡು ದಿನ ಪ್ರಯಾಣಿಸುತ್ತಿದ್ದ ಕಾಚೆಗುಡ- ಮಂಗಳೂರು ಸೆಂಟ್ರಲ್- ಕಾಚೆಗುಡ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕುಂದಾಪುರ ಮೂಲಕ ಮುರ್ಡೇಶ್ವರ ತನಕ ವಿಸ್ತರಿಸಲು ರೈಲ್ವೆ ಸಚಿವಾಲಯ ತೀರ್ಮಾನಿಸಿದೆ.
- ಪ್ರಸ್ತಾವಿತ ರೈಲಿನ ಮಾನ್ಸೂನ್ ವೇಳಾಪಟ್ಟಿ (ಅಕ್ಟೋಬರ್ 29 ತನಕ ಕಾಚೆಗುಡಕ್ಕೆ ಹಾಗೂ ಅಕ್ಟೋಬರ್ 30 ತನಕ ಮುರ್ಡೇಶ್ವರಕ್ಕೆ) ಹೀಗಿದೆ:
ಪ್ರತೀ ಮಂಗಳವಾರ ಮತ್ತು ಶುಕ್ರವಾರ ಕಾಚೆಗುಡದಿಂದ ಮುಂಜಾನೆ 06.05 ಕ್ಕೆ ಹೊರಡುವ ರೈಲು (12789) ಮರುದಿನ ಮಧ್ಯಾಹ್ನ 2.50 ಕ್ಕೆ ಮುರ್ಡೇಶ್ವರ ತಲುಪಲಿದೆ.
ಪ್ರತೀ ಬುಧವಾರ ಮತ್ತು ಶನಿವಾರ ಸಂಜೆ 4 ಕ್ಕೆ ಮುರ್ಡೇಶ್ವರದಿಂದ ಹೊರಡುವ ರೈಲು (12790) ಮರುದಿನ ಮಧ್ಯರಾತ್ರಿ 11.40 ಕ್ಕೆ ಕಾಚೆಗುಡ ತಲುಪಲಿದೆ.
- ಮಾನ್ಸೂನ್ ಬಳಿಕದ ವೇಳಾಪಟ್ಟಿ (ನವೆಂಬರ್ 1 ರಿಂದ ಕಾಚೆಗುಡಕ್ಕೆ ಮತ್ತು ನವೆಂಬರ್ 2 ರಿಂದ ಮುರ್ಡೇಶ್ವರಕ್ಕೆ) ಹೀಗಿದೆ:
ಪ್ರತೀ ಮಂಗಳವಾರ ಮತ್ತು ಶುಕ್ರವಾರ ಕಾಚೆಗುಡದಿಂದ ಮುಂಜಾನೆ 06.05 ಕ್ಕೆ ಹೊರಡುವ ರೈಲು (12789) ಮರುದಿನ ಮಧ್ಯಾಹ್ನ 2.05 ಕ್ಕೆ ಮುರ್ಡೇಶ್ವರ ತಲುಪಲಿದೆ.
ಪ್ರತೀ ಬುಧವಾರ ಮತ್ತು ಶನಿವಾರ ಸಂಜೆ 3.30 ಕ್ಕೆ ಮುರ್ಡೇಶ್ವರದಿಂದ ಹೊರಡುವ ರೈಲು (12790) ಮರುದಿನ ಮಧ್ಯರಾತ್ರಿ 11.40 ಕ್ಕೆ ಕಾಚೆಗುಡ ತಲುಪಲಿದೆ.
ಕರಾವಳಿಯ ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ (ಬೈಂದೂರು), ಭಟ್ಕಳದಲ್ಲಿ ರೈಲಿಗೆ ನಿಲುಗಡೆ ದೊರೆಯಲಿದೆ.