ನ್ಯೂಸ್

ತುಸು ಏರಿಕೆ ಕಂಡ ಟೊಮೆಟೋ ಬೆಲೆ / ಮಂಗಳವಾರ ೫೦೦ ರೂ. / ಬುಧವಾರ ೪೫೦ ರೂ. / ಏರಿಕೆಯೋ ಇಳಿಕೆಯೋ ಎಂಬ ಆತಂಕದಲ್ಲಿ ರೈತ!

ವಿಜಯವಾಣಿ ಸುದ್ದಿಜಾಲ ಕೋಲಾರ

ಪಾತಾಳಕ್ಕೆ ಕುಸಿದಿದ್ದ ಟೊಮೆಟೋ ಬೆಲೆ ತುಸು ಏರಿಕೆ ಕಂಡಿದ್ದು, ೧೫ ಕೆ.ಜಿ ಬಾಕ್ಸ್ ೧೦೦ ರಿಂದ ೪೫೦ ರೂ.ಗಳ ತನಕ ಮಾರಾಟವಾಗುತ್ತಿದೆ. ಕಳೆದ ೭ ತಿಂಗಳಿನಿAದ ಸತತವಾಗಿ ಬೆಲೆ ಇಲ್ಲದೆ ನಷ್ಟ ಅನುಭವಿಸಿದ ರೈತನಿಗೆ ಕಳೆದ ಒಂದು ವಾರದಿಂದ ದಿನೇ ದಿನೇ ಬೆಲೆ ಏರಿಕೆಯಾಗತೊಡಗಿದೆ.

ಮೇ ತಿಂಗಳಿನಿAದ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಟೊಮೆಟೋಗೆ ಉತ್ತಮ ಧಾರಣೆ ಬರುತ್ತದೆಂದು ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯನ್ನು ಬೆಳೆಯಲಾಗಿದೆ. ಮಾರ್ಚ್ ೧೫ರ ನಂತರ ಬೆಲೆ ಬರುತ್ತದೆಂದು ಕಾದಿದ್ದ ರೈತರಿಗೆ ಜೂನ್ ತಿಂಗಳು ಮುಗಿದರೂ ಬೆಲೆ ಬಾರದೆ ರೈತರು ಕಂಗಾಲಾದರು.

ಈಗಾಗಲೇ ರೈತರ ತೋಟಗಳಲ್ಲಿ ಶೇ.೭೦ ರಷ್ಟು ಕಾಯಿ ಮುಗಿದಿರುವ ಸಂದರ್ಭದಲ್ಲಿ ಕಳೆದ ಒಂದು ವಾರದಿಂದ ಹಂತ ಹಂತವಾಗಿ ತುಸು ಏರಿಕೆಯಾಗತೊಡಗಿದೆ. ಬೆಲೆ ಕುಸಿತದಿಂದ ಕಂಗಾಲಾದ ರೈತರು ಟೊಮೆಟೋ ತೋಟಗಳ ಮೇಲೆ ಆಸಕ್ತಿ ಕಳೆದುಕೊಂಡ ಕಾರಣ ಬಿಂಗಿರೋಗ ಸೇರಿದಂತೆ ವೈರಸ್ ಕಾಟ ಹೆಚ್ಚಾಗತೊಡಗಿತು.

೧೫ ಕೆ.ಜಿ.ಬಾಕ್ಸ್ ೫೦ ರೂ.ಗಳಿಂದ ೧೫೦ ರೂ.ಗಳ ತನಕ ಮಾರಾಟವಾಗುತ್ತಿದ್ದುದ್ದನ್ನು ಕಂಡ ರೈತ ತೋಟಗಳಿಗೆ ಔಷಧಿ ಗೊಬ್ಬರ ಎಲ್ಲವನ್ನೂ ನಿಲ್ಲಿಸಿ ಇರುವ ಫಸಲನ್ನು ಕಿತ್ತುಕೊಳ್ಳಲು ಮುಂದಾದರು. ಇದರಿಂದ ತೋಟಗಳ ಬೆಳೆವಣಿಗೆಯು ಕುಂಠಿತಗೊAಡಿತು.

ರೈತರ ವಾರ್ಷಿಕ ಬೆಳೆಗಳಾದ ಮಾವು, ನೇರೆಳೆಗೆ ಬೆಲೆ ಸಿಗದ ಕಾರಣ ಆತಂಕದಲ್ಲಿದ್ದ ರೈತನಿಗೆ ಸಿಡಿಲು ಬಡಿದಂತೆ ಆಯಿತು. ಟೊಮೆಟೋ ಬೆಲೆಯು ಏರಿಕೆ ಆಗದಿದ್ದರಿಂದ ರೈತರು ಕಷ್ಟಗಳಿಂದ ಪಾರಾಗುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ. ಈಗ ಟೊಮೆಟೋ ಬೆಲೆ ತುಸು ಏರಿಕೆ ಕಂಡಿರುವ ಕಾರಣ ಇರುವ ಫಸಲಿಗೆ ತೋಟಕ್ಕೆ ಹಾಕಿರುವ ಬಂಡವಾಳವಾದರೂ ಬರುತ್ತದೆಯೇ ಎಂದು ಕಾಯತೊಡಗಿದ್ದಾರೆ.

ಮಂಗಳವಾರ ೧೫ ಕೆ.ಜಿ. ಬಾಕ್ಸ್ ೧೦೦ ರೂ.ಗಳಿಂದ ೫೦೦ ರೂ.ಗಳ ತನಕ ಮಾರಾಟವಾಗಿತ್ತು. ಬುಧವಾರ ೪೫೦ ರೂ.ಗಳಿಗೆ ಮಾರಾಟವಾಗಿರುವುದರಿಂದ ಮತ್ತೆ ಟೊಮೆಟೋ ಬೆಲೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವುದರಿಂದ ದಿನೇ ದಿನೇ ಏರಿಕೆಯಾಗುತ್ತದೆಯೋ ಅಥವಾ ಕುಸಿಯುತ್ತಿದೆಯೋ ಎಂಬ ಭೀತಿ ರೈತರನ್ನು ಕಾಡುತ್ತಿದೆ.

ಚಿತ್ರ ೦೨ ಕೆ.ಎಲ್.ಆರ್. ೦೩ : ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬಾಕ್ಸ್ ಚಿತ್ರ