ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿತವಾದ ಬಡಾವಣೆಗಳಲ್ಲಿ ಮಂಜೂರಾತಿ ಪಡೆದಿರುವ ಸಾರ್ವಜನಿಕ ಹಿತದೃಷ್ಠಿಯಿಂದ ಮತ್ತೊಮ್ಮೆ ಸಾರ್ವಜನಿಕರು ತಮ್ಮ ನಿವೇಶನ/ಮನೆಗಳಿಗೆ ಹೊಂದಿಕೊಂಡಂತೆ ತುಂಡು ಜಾಗ ಲಭ್ಯವಿದ್ದಲ್ಲಿ ಅಂತಹ ತುಂಡು ಜಾಗವನ್ನು ಕೋರಿ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ಡಿಸೆಂಬರ್ 26 ರಿಂದ ಜನವರಿ 25 ರವರೆಗೆ ವಿಸ್ತರಿಸಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.