ನ್ಯೂಸ್

ತಾಲ್ಲೂಕಿನಾದ್ಯಂತ `ನನ್ನ ಮಣ್ಣು-ನನ್ನ ದೇಶ' ಅಭಿಯಾನ ಯಶಸ್ವಿ/ತಾಪಂ ಇಒ ಮುನಿಯಪ್ಪ೩೪ ಗ್ರಾ.ಪಂಗಳಿoದ ಸಂಗ್ರಹಿಸಿದ ಮಣ್ಣಿನ ಮೃತ್ತಿಕೆಗೆ ಪೂಜೆ ಸಲ್ಲಿಸಿ ಸ್ವಯಂ ಸೇವಕರಿಗೆ ಹಸ್ತಾಂತರ

ವಿಜಯವಾಣಿ ಸುದ್ದಿಜಾಲ ಕೋಲಾರ

ಏಕ ಭಾರತ ಶ್ರೇಷ್ಠ ಭಾರತ ಎಂಬ ಘೋಷಣೆಯಡಿ ನನ್ನ ದೇಶ ನನ್ನ ಅಭಿಯಾನ' ಪ್ರತಿಯೊಬ್ಬ ಪ್ರಜೆಯಲ್ಲೂ ಐಕ್ಯತಾ ಮನೋಭಾವ ಬಲಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ತಿಳಿಸಿದರು.

ದೇಶದ ಪ್ರಜೆಗಳಲ್ಲಿ ನಾವೆಲ್ಲರೂ ಒಂದೇ ಎಂಬ ಐಕ್ಯತಾ ಮನೋಭಾವ ಮೂಡಿಸುವ ಸಲುವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಡೆಸಲಾದ `ನನ್ನ ಮಣ್ಣು ನನ್ನ ದೇಶ' ಅಭಿಯಾನದಡಿ ತಾಲ್ಲೂಕಿನ ೩೪ ಗ್ರಾ.ಪಂಗಳಲ್ಲಿ ಸಂಗ್ರಹಿಸಿದ ಪವಿತ್ರ ಮಣ್ಣಿನ ಮೃತ್ತಿಕೆಗೆ ಮಂಗಳವಾರ ಪೂಜೆ ಸಲ್ಲಿಸಿ ದೆಹಲಿಗೆ ತೆರಳುವ ಸ್ವಯಂಸೇವಕರಿಗೆ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ದೇಶದ ಬಹು ಮಹತ್ವ ಕಾರ್ಯಗಳಿಗೆ ಈ ರೀತಿಯಲ್ಲಿ ದೇಶದೆಲ್ಲೆಡೆ ಮಣ್ಣಿನ ಸಂಗ್ರಹ ಮಾಡಿ ಬಳಿಸುವುದರಿಂದ ಪ್ರತಿಯೊಬ್ಬ ಪ್ರಜೆಯಲ್ಲೂ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ. ಹಾಗಾಗಿ ನಮ್ಮ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿAದ ಪವಿತ್ರ ಮಣ್ಣುನ್ನು ಪಡೆದು ಗೌರವ ಪೂರ್ವಕವಾಗಿ ದೆಹಲಿಗೆ ಕಳಿಸಿಕೊಡಲಾಗುತ್ತಿದೆ ಎಂದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಮರವೀರರ ನೆನಪಿಗಾಗಿ ಆಯೋಜಿಸಿರುವ ಮೇರ ಮಟ್ಟಿ, ಮೇರಾ ದೇಶ್, ನಮ್ಮ ಮಣ್ಣು, ನಮ್ಮ ದೇಶ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಜನತೆ ಅತ್ಯಂತ ಸಂಭ್ರಮ, ಗೌರವಯುತವಾಗಿ ಭಾಗಿಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ದೇಶಕ್ಕಾಗಿ ತಮ್ಮ ಜೀವ ಹಾಗೂ ಸರ್ವಸ್ವವನ್ನೇ ತ್ಯಾಗ ಮಾಡಿದ ಅಮರ ವೀರರ ಸೇವೆ ಅನನ್ಯ. ಸರ್ಕಾರವು ಮೇರ ಮಟ್ಟಿ, ಮೇರಾ ದೇಶ್ ಕಾರ್ಯಕ್ರಮದ ಮೂಲಕ ದೇಶದ ಎಲ್ಲಾ ಭಾಗಗಳಿಂದ ಪವಿತ್ರವಾದ ಅಕ್ಕಿ ಮತ್ತು ಮಣ್ಣನ್ನು ಸಂಗ್ರಹಿಸಿ, ಅದನ್ನು ದೆಹಲಿಯಲ್ಲಿ ನಿರ್ಮಿಸಲು ಹೊರಟಿರುವ ಅಮೃತ ವಾಟಿಕ ಸ್ಥಳಕ್ಕೆ ಬಳಸಲಾಗುತ್ತಿದೆ ಎಂದರು.

ದೇಶಕ್ಕಾಗಿ ಪ್ರಾಣ ಅರ್ಪಿಸಿದ ಸ್ವಾತಂತ್ರö್ಯ ಹೋರಾಟಗಾರರು ಮತ್ತು ವೀರ ಸೇನಾನಿಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆ ಎಲ್ಲರಿಗೂ ಇದೆ ಎಂದ ಅವರು, ಸರ್ಕಾರದ ಆದೇಶದಂತೆ ಈ ಅಭಿಯಾನಕ್ಕೆ ಚಾಲನೆನೀಡಲಾಗಿತ್ತು, ಇದೀಗ ಪ್ರತಿ ಗ್ರಾ.ಪಂನಿAದಲೂ ಸಾರ್ವಜನಿಕರು,ಜನಪ್ರತಿನಿಧಿಗಳನ್ನೊಳಗೊಂಡ ತಂಡ ಮಣ್ಣಿನ ಸಂಗ್ರಹ ಮಾಡಿ ತಾಪಂಗೆ ಹಸ್ತಾಂತರಿಸಿದ್ದು, ಮಣ್ಣಿನಮೃತ್ತಿಕೆಗೆ ಪೂಜೆ ಸಲ್ಲಿಸಿ ದೆಹಲಿಗೆ ತೆರಳುವ ಸ್ವಯಂಸೇವಕರಿಗೆ ಹಸ್ತಂತರಿಸಲಾಯಿತು.

ನೌಕರರ ಸಂಘದ ಕಾರ್ಯಾಧ್ಯಕ್ಷ ಹಾಗೂ ತಾಪಂ ವ್ಯವಸ್ಥಾಪಕ ಎನ್.ಶ್ರೀನಿವಾಸರೆಡ್ಡಿ, ಸಹಾಯಕ ನಿರ್ದೇಶಕ (ಗ್ರಾ.ಉ) ಅಶೋಕ್ ಕುಮಾರ್, ತಾಲೂಕು ಯೋಜನಾಧಿಕಾರಿ ರಮೇಶ್, ಬೆಗ್ಲಿ ಹೊಸಹಳ್ಳಿ ಗ್ರಾಪಂ ಪಿಡಿಒ ಮಧುಮತಿ, ಇಂದ್ರಮ್ಮ , ನರೇಗಾ ಇಂಜಿನಿಯರ್‌ಗಳು ಹಾಗೂ ತಾಲೂಕು ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೫ : ಕೋಲಾರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಡೆಸಲಾದ `ನನ್ನ ಮಣ್ಣು ನನ್ನ ದೇಶ' ಅಭಿಯಾನದಡಿ ತಾಲ್ಲೂಕಿನ ೩೪ ಗ್ರಾ.ಪಂಗಳಲ್ಲಿ ಸಂಗ್ರಹಿಸಿದ ಪವಿತ್ರ ಮಣ್ಣಿನ ಮೃತ್ತಿಕೆಗೆ ಪೂಜೆ ಸಲ್ಲಿಸಿದ ತಾಪಂ ಇಒ ಪಿ.ಮುನಿಯಪ್ಪ, ದೆಹಲಿಗೆ ತೆರಳುವ ಸ್ವಯಂಸೇವಕರಿಗೆ ಹಸ್ತಾಂತರಿಸಿದರು.