ಹುಣಸೂರು ತಾ.ಪಂ. ಆವರಣದಲ್ಲಿರುವ ವಸತಿಗೃಹಗಳನ್ನು ಇಒ ಬಿ.ಕೆ.ಮನು ಪರಿಶೀಲನೆ ನಡಸಿದರು. ಪ್ರಭಾಕರ್, ವಿವೇಕಾನಂದ ಇತರರು ಇದ್ದರು. 
ನ್ಯೂಸ್

ತಾಪಂ ವಸತಿಗೃಹಗಳ ಪರಿಶೀಲನೆ

ಹುಣಸೂರು: ದುಸ್ಥಿತಿಯಲ್ಲಿರುವ ತಾಲೂಕು ಪಂಚಾಯಿತಿ ಸಿಬ್ಬಂದಿಗಾಗಿ ಮೀಸಲಿರುವ ವಸತಿಗೃಹಗಳನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಪರಿಶೀಲನೆ ನಡೆಸಿದರು.


ಇಲ್ಲಿನ 8 ವಸತಿಗೃಹಗಳಲ್ಲಿ ಜೀವಭಯದಲ್ಲೇ ಸಿಬ್ಬಂದಿ ವಾಸಿಸುತ್ತಿದ್ದಾರೆ. ಕೆಲ ಮನೆಗಳಲ್ಲಿ ಬೇರೆ ಇಲಾಖೆ ಸಿಬ್ಬಂದಿ ವಾಸವಿದ್ದಾರೆ ಎನ್ನುವ ದೂರುಗಳು ಬಂದ ಹಿನ್ನಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಂಪೌಂಡ್ ಇಲ್ಲದ, ಚರಂಡಿ ವ್ಯವಸ್ಥೆ ಹದಗೆಟ್ಟಿರುವ, ಗೋಡೆಗಳು ಬಿರುಕು ಬಿಟ್ಟಿರುವ ಮನೆಗಳನ್ನು ಗಮನಿಸಿದರು.


ಈ ವೇಳೆ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ತಾ.ಪಂ. ಸಿಬ್ಬಂದಿಗಾಗಿ ಈ ವಸತಿಗೃಹಗಳು ಮೀಸಲಾಗಿದ್ದರೂ ಇದರ ನಿರ್ವಹಣೆ ಲೋಕೋಪಯೋಗಿ ಇಲಾ ಸುಪರ್ದಿಯಲ್ಲಿದೆ. ಬಾಡಿಗೆ ಕೂಡ ಲೋಕೋಪಯೋಗಿ ಇಲಾಖೆ ಹೆಡ್ ಆಫ್ ಅಕೌಂಟ್‌ಗೆ ಜಮಾ ಆಗುತ್ತಿದೆ. ಹೀಗಾಗಿ, ವಸತಿಗೃಹಗಳ ನಿರ್ವಹಣೆ ಲೋಕೋಪಯೋಗಿ ಇಲಾಖೆ ಮಾಡಬೇಕಿದೆ. ಈ ವ್ಯವಸ್ಥೆಯ ಕುರಿತು ಸಮಗ್ರ ಮಾಹಿತಿಯನ್ನು ಸರ್ಕಾರದ ಮಟ್ಟದಲ್ಲಿ ಪಡೆದು ನಂತರ ಪರಿಹಾರ ಕೈಗೊಳ್ಳಲು ನಿರ್ಧರಿಸಿದ್ದೇನೆ. ಮುಖ್ಯರಸ್ತೆಯ ಬಳಿಯಿರುವ ಮೊದಲ ವಸತಿಗೃಹ ವಾಸಿಸಲು ಯೋಗ್ಯವಲ್ಲವೆಂದು ಲೋಕೋಪಯೋಗಿ ಇಲಾಖೆ ವರದಿ ನೀಡಿದ್ದು, ಅಲ್ಲಿ ಯಾರೂ ವಾಸಿಸಲು ಅನುಮತಿ ನೀಡಿಲ್ಲ. ಈ ವ್ಯಾಪ್ತಿಯ ನಗರಸಭಾ ಸದಸ್ಯ ವಿವೇಕಾನಂದ ಈ ಕುರಿತು ದೂರು ನೀಡಿದ್ದು, ಪರಿಶೀಲನೆ ನಡೆಸಿದ್ದು, ಶೀಘ್ರ ಪರಿಹಾರ ಕೈಗೊಳ್ಳಲಾಗುವುದು ಎಂದರು.


ನಗರಸಭಾ ಸದಸ್ಯ ವಿವೇಕಾನಂದ, ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ಪ್ರಭಾಕರ್, ತಾ.ಪಂ. ಲೆಕ್ಕಾಧಿಕಾರಿ ಸದಾಶಿವಯ್ಯ ಇದ್ದರು.