ಚಿಕ್ಕಬಳ್ಳಾಪುರ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಆಡಳಿತಕ್ಕೆ ಹೆಚ್ಚಿನ ಜನರ ಬೆಂಬಲ ಸಿಗುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಸಂತಸ ವ್ಯಕ್ತಪಡಿಸಿದರು.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಹಿಂದುಳಿದ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ತಳಮಟ್ಟದಿಂದ ಬಿಜೆಪಿಯನ್ನು ಮತ್ತಷ್ಟು ಸಂಘಟಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ವಿವೆಕಾನಂದ ಡಬ್ಬಿ, ಕಾರ್ಯಕಾರಿಣಿ ಸದಸ್ಯ ಚೆನ್ನಕೇಶವ, ಜಿಲ್ಲಾಧ್ಯಕ್ಷ ಸಿ.ಎಸ್.ಮಂಜುನಾಥ್ ಮತ್ತಿತರರು ಇದ್ದರು.
ಪದಾಧಿಕಾರಿಗಳ ಆಯ್ಕೆ
ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ಶಿವಕುಮಾರ್, ನಾರಾಯಣಸ್ವಾಮಿ, ಪಾರ್ಥಸಾರಥಿ, ಎನ್.ಮಂಜುನಾಥ್, ಕೆ.ಎಂ.ರಮೇಶ, ಕೋಶಾಧ್ಯಕ್ಷ ಮುನಿನಾರಾಯಣ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎನ್.ಆಂಜನೇಯಗೌಡ, ಜಿ.ಎ.ಲಕ್ಷ್ಮೀಪತಿ, ಕಾರ್ಯದರ್ಶಿಗಳಾದ ಎಸ್.ಶ್ರೀನಿವಾಸ, ವಿ.ದೇವರಾಜು, ಸುರೇಶ, ಶ್ರೀನಿವಾಸಯ್ಯ, ಈಶ್ವರ, ಕಾರ್ಯಕಾರಿಣಿ ಸದಸ್ಯರಾದ ಶಿವಪ್ಪ, ಎಂ.ಬಿ.ಸದಾಶಿವ, ಕೆ.ನರೇಶ, ಎಸ್.ಬಾಲು, ಎಂ.ಪ್ರಸನ್ನಕುಮಾರ್, ಸುಮನ್, ಮಹೇಶ್, ಎಸ್.ರವಿರಾಜ್, ರಾಹುಲ್, ಟಿ.ಕೊಂಡಪ್ಪ, ಎ.ಪಿ.ಲವಕುಮಾರ್, ಎಲ್.ಕೇಶವಮೂರ್ತಿ, ಆಂಜನಯ್ಯಗೌಡ, ವಿ.ದಿನೇಶ್ ಕುಮಾರ್, ಕೆ.ಎನ್.ಸುದರ್ಶನ್, ಪಿ.ಮೋಹನ್ ಕುಮಾರ್, ಡಿ.ಕೆ.ಶ್ರೀನಾಥ್‌ರವರನ್ನು ಆಯ್ಕೆ ಮಾಡಲಾಗಿದೆ.