ವಿಜಯವಾಣಿ ಸುದ್ದಿಜಾಲ ಕೋಲಾರ
ಯಕೃತ್ತಿನ ಸಮಸ್ಯೆಯಿಂದ ನರಳುತ್ತಿದ್ದ ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರಿಗೆ ಅಪರೂಪದಲ್ಲಿ ಅಪರೂಪ ಎಂಬAತ ಯಕೃತ್ತು ಕಸಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಜೀವದಾನ ಮಾಡಿದೆ.
ವೈದ್ಯಕೀಯ ಕ್ಷೇತ್ರದಲ್ಲಿನ ಸವಾಲು ಎಂಬAತೆ ಅಪರೂಪದ ಮತ್ತು ಸಂಕೀರ್ಣವಾದ ಲಿವಿಂಗ್ ಡೋನರ್ ಲಿವರ್ ಟ್ರಾನ್ಸ್ಪ್ಲಾಂಟ್ (ಎಲ್‌ಡಿಎಲ್‌ಟಿ) ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ಚಿಕ್ಕಬಳ್ಳಾಪುರದ ೪೫ ವರ್ಷದ ವ್ಯಕ್ತಿಗೆ ಹೊಸ ಜೀವನ ನೀಡಿದೆ.
ನಾನ್- ಆಲ್ಕೊಹಾಲಿಕ್ ಸ್ಟೀಟೊಹೆಪಟೈಟಿಸ್ (ಎನ್‌ಎಎಸ್‌ಎಚ್) ಸಂಬAಧಿತ ಸಿರೋಸಿಸ್ ಜೊತೆಗೆ ಬಹು ಅಂಗಾAಗ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಅವರ ಅತ್ತಿಗೆ ಸ್ವಯಂಪ್ರೇರಿತರಾಗಿ ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡುವ ಮೂಲಕ ಮೈದುನನನ್ನು ರಕ್ಷಿಸಲಾಗಿದೆ.
ಇದು ವೈದ್ಯಕೀಯ ಸವಾಲುಗಳು ಮತ್ತು ಕಾನೂನು ಅಡೆತಡೆಗಳನ್ನು ನಿವಾರಿಸಿದ ನಿಸ್ವಾರ್ಥ ಕಾರ್ಯವಾಗಿದೆ. ತೀವ್ರ ಉಸಿರಾಟದ ತೊಂದರೆ, ಜೀರ್ಣಾಂಗ ವ್ಯವಸ್ಥೆಯಲ್ಲಿ ಛಿದ್ರಗೊಂಡ ರಕ್ತನಾಳಗಳಿಂದ (ವೇರಿಯೇಸ್‌ಗಳು) ಅಪಾಯಕಾರಿ ಆಂತರಿಕ ರಕ್ತಸ್ರಾವ ಮತ್ತು ಹೊಟ್ಟೆ ಮತ್ತು ಎದೆಯಲ್ಲಿ ಸುಮಾರು ೧೦ ಲೀಟರ್ ದ್ರವದ ಶೇಖರಣೆಯಿಂದ ಬಳಲುತ್ತಿದ್ದ ರೋಗಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಗೆ ರೋಗಿಯನ್ನು ಕರೆತಂದಿದ್ದರು.
ಈ ಪ್ರಕರಣವನ್ನು ಮತ್ತಷ್ಟು ಜಟಿಲವಾಗಿಸಿದ್ದು, ಅವರಿಗಿದ್ದ ಅನಿಯಂತ್ರಿತ ಟೈಪ್ ೨ ಮಧುಮೇಹ ಮತ್ತು ಹೆಚ್ಚಿನ ಎಂಇಎಲ್‌ಡಿ (ಎಂಡ್-ಸ್ಟೇಜ್ ಲಿವರ್ ಡಿಸೀಸ್‌ನ ಮಾದರಿ). ಇದು ೩೧ ಅಂಕಗಳು ಇದ್ದವು. ಇದು ಅವರ ಯಕೃತ್ತಿನ ಕಾಯಿಲೆ ಎಷ್ಟು ತೀವ್ರವಾಗಿದೆ ಮತ್ತು ಸಾಯುವ ಅಪಾಯದ ಗಂಭೀರ ಸಂಕೇತವಾಗಿತ್ತು. ಅವರಿಗೆ ಈ ಕಸಿಯನ್ನು ಮಾಡದಿದ್ದರೆ ೩ ತಿಂಗಳೊಳಗೆ ಸಾವಿನ ಸಾಧ್ಯತೆ ಶೇ.೫೨.೬ ಆಗಿತ್ತು.
ಶಸ್ತ್ರಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಹೆಪಾಟೊ ಪ್ಯಾಂಕ್ರಿಯಾಟೊ ಬಿಲಿಯರಿ ಮತ್ತು ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟೇಶನ್ ವಿಭಾಗದ ಹಿರಿಯ ತಜ್ಞ ಡಾ.ಎಚ್.ಆರ್.ಎಸ್ ಗಿರ್ನ್ ರವರುಗಳ ಪ್ರಕಾರ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗೆ ಬಹು ಅಂಗಾAಗ ವೈಫಲ್ಯವಿದ್ದು, ರಕ್ತದೊತ್ತಡವನ್ನು ಬೆಂಬಲಿಸಲು ಡಯಾಲಿಸಿಸ್ ಮತ್ತು ಔಷಧಿಗಳ ಅಗತ್ಯವಿತ್ತು. ಇಂತಹ ತೀವ್ರ ಅಸ್ವಸ್ಥ ರೋಗಿಗೆ ಯಶಸ್ವೀ ಯಕೃತ್ತು ಕಸಿ ನಡೆಸುವುದು ಮತ್ತು ಅವರನ್ನು ೧೪ ದಿನಗಳಲ್ಲಿ ಮನೆಗೆ ಕಳುಹಿಸಿರುವುದು ಅತ್ಯಂತ ಅಪರೂಪವಾಗಿದೆ ಎಂದು ತಿಳಿಸಿದ್ದಾರೆ.
ರೋಗಿಯ ಪತ್ನಿ ಅಂಗದಾನ ಮಾಡಲು ವೈದ್ಯಕೀಯವಾಗಿ ಅನರ್ಹರು ಎಂದು ಕಂಡುಬAದಾಗ ಭರವಸೆ ಕ್ಷೀಣಿಸುವಂತೆ ತೋರುತ್ತಿತ್ತು. ಆಗ ಅವರ ಅತ್ತಿಗೆ ಮುಂದೆ ಬಂದು ಕುಟುಂಬಕ್ಕೆ ಹೊಸ ಭರವಸೆಯ ಅಲೆಯನ್ನು ತಂದರು.
ಡಿಎನ್‌ಎ ಪರೀಕ್ಷೆ, ಪೊಲೀಸ್ ತಪಾಸಣೆ ಮತ್ತು ತಕ್ಷಣದ ಕುಟುಂಬ ದಾನಿಗಳಿಗೆ ಕಸಿ ಸಮಿತಿಯಿಂದ ಅನುಮೋದನೆ ಸೇರಿದಂತೆ ಭಾರತೀಯ ಕಸಿ ಕಾನೂನಿನಡಿಯ ಕಠಿಣ ಮೌಲ್ಯಮಾಪನ ಪ್ರಕ್ರಿಯೆಗೆ ಒಳಗಾಗಿದ್ದರು.
ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್ಪ್ಲಾಂಟ್ ವಿಭಾಗದ ತಜ್ಞ ಡಾ.ಅಖಿಲ್ ದೇಶ್‌ಮುಖ್ ಮಾತನಾಡಿ, ಈ ಪ್ರಕರಣ ಸಮಯದ ವಿರುದ್ಧದ ಓಟವಾಗಿತ್ತು. ರೋಗಿಯ ಆರೋಗ್ಯ ಬೇಗನೆ ಕ್ಷೀಣಿಸುತ್ತಿತ್ತು ಮತ್ತು ಸೂಕ್ತವಾದ ಮೃತ ದಾನಿ ಅಂಗ ಲಭ್ಯವಿಲ್ಲದ ಕಾರಣ, ಹಸ್ತಕ್ಷೇಪಕ್ಕೆ ಅವಕಾಶವು ತಪ್ಪಿ ಹೋಗುತ್ತಿತ್ತು. ಭಾವನಾತ್ಮಕ ಮತ್ತು ಕಾನೂನು ಅಡೆತಡೆಗಳ ಹೊರತಾಗಿಯೂ, ಅತ್ತಿಗೆಯ ಧೈರ್ಯಶಾಲಿ ಮತ್ತು ನಿಸ್ವಾರ್ಥ ನಿರ್ಧಾರ ನಿಜವಾಗಿಯೂ ಜೀವ ಉಳಿಸುವಂತಿತ್ತು. ಅವರ ಕಾರ್ಯ ಅವರಿಗೆ ಜೀವನದಲ್ಲಿ ಎರಡನೇ ಅವಕಾಶ ಒದಗಿಸಿದ್ದಲ್ಲದೆ, ಎಲ್ಲವನ್ನೂ ಕಳೆದುಕೊಳ್ಳುವ ಅಂಚಿನಲ್ಲಿದ್ದ ಕುಟುಂಬವನ್ನು ಮತ್ತೆ ಒಟ್ಟಿಗೆ ಸೇರಿಸಿತು ಎಂದು ಅಭಿಪ್ರಾಯಪಟ್ಟರು.
ಸಣ್ಣ ಗಾತ್ರದ ಕಸಿ ಮಾಡುವಿಕೆಯನ್ನು ನಿರ್ವಹಿಸಲು ಮತ್ತು ಅತ್ಯುತ್ತಮ ಯಕೃತ್ತಿನ ಕಾರ್ಯವನ್ನು ಖಾತರಿಪಡಿಸಲು ಈ ಶಸ್ತ್ರಚಿಕಿತ್ಸೆಯು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಲಾಯಿತು. ರೋಗಿಯು ಗಮನಾರ್ಹವಾಗಿ ಚೇತರಿಸಿಕೊಂಡು ಶಸ್ತ್ರಚಿಕಿತ್ಸೆಯ ನಂತರ ಕೇವಲ ೧೪ ದಿನಗಳ ನಂತರ ಸ್ಥಿರ ಸ್ಥಿತಿಯಲ್ಲಿ ಮನೆಗೆ ಮರಳಿ ತಮ್ಮ ಬಾಣಸಿಗ ವೃತ್ತಿ ಪುನರಾರಂಭಿಸಿದ್ದಾರೆ.
ಚಿತ್ರ ೦೫ ಕೆ.ಎಲ್.ಆರ್. ೦೯ : ಯಕೃತ್ ಕಸಿಯಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿ