ನ್ಯೂಸ್

ತಡೆಹಿಡಿದಿದ್ದ ಚುನಾವಣೆ ಫಲಿತಾಂಶ ಪ್ರಕಟ

ಹಲಗೂರು: ತಡೆಹಿಡಿಯಲಾಗಿದ್ದ ಸಮೀಪದ ನಿಟ್ಟೂರು ಕೋಡಿಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಫಲಿತಾಂಶ ಶಕ್ರವಾರ ಪ್ರಕಟವಾಗಿದೆ.

ಜು.27ರಂದು ಐದು ವರ್ಷಗಳ ಅವಧಿಗೆ ಚುನಾವಣೆ ನಡೆದಿದ್ದು, ಫಲಿತಾಂಶವನ್ನು ಹೈಕೋರ್ಟ್ ಆದೇಶದ ಮೇರೆಗೆ ತಡೆಹಿಡಿಯಲಾಗಿತ್ತು. ಚುನಾವಣಾಧಿಕಾರಿ ತ್ಯಾಗರಾಜ್ ಪ್ರಸಾದ್ ಅವರು ಕೆ.ಮಂಚೇಗೌಡ, ಪ್ರಕಾಶ್, ನಿಂಗೇಗೌಡ, ಕೆ.ಸಿ.ಗೌಡ, ಸಣ್ಣಪ್ಪ, ರುಕ್ಮಾಂಗದಾಚಾರಿ, ಗೋವಿಂದರಾಜು, ರಾಜೇಗೌಡ, ಎನ್.ತಾಯಮ್ಮ, ಕೆಂಪಮ್ಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ನಿರ್ದೇಶಕರಾಗಿ ಆಯ್ಕೆಯಾದ ಎನ್.ರಾಜೇಗೌಡ ಮಾತನಾಡಿ, ಹೈಕೋರ್ಟ್ ಆದೇಶದ ಮೇರೆಗೆ ತಡೆಹಿಡಿಯಲಾಗಿದ್ದ ಫಲಿತಾಂಶವನ್ನು ಶುಕ್ರವಾರ ಘೋಷಣೆ ಮಾಡಲಾಗಿದ್ದು, ನಮ್ಮ ಪಕ್ಷದಿಂದ ಎಂಟು ಜನರು ಆಯ್ಕೆಯಾಗಿದ್ದು, ಪ್ರತಿಪಕ್ಷದಲ್ಲಿ ಇಬ್ಬರು ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರು, ಒಕ್ಕೂಟದ ಏಳಿಗೆಗಾಗಿ ಎಲ್ಲರ ಸಲಹೆ, ಸಹಕಾರ ಪಡೆದು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ನಿಟ್ಟೂರು ಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರಕಾಶ್, ಹಾಲು ಪರೀಕ್ಷಕ ನಂಜುಂಡೇಗೌಡ, ಸಹಾಯಕ ಕೃಷ್ಣ, ಪೂರ್ಣಿಮಾ, ಮತ್ತಿತರರು ಹಾಜರಿದ್ದರು.