ನ್ಯೂಸ್

ತಜ್ಞ ಅಭಿಪ್ರಾಯ: ನಿರೀಕ್ಷೆ ಹುಸಿ ಮಾಡದ ಬಜೆಟ್

ಟಿ.ವಿ. ಮೋಹನ್​ದಾಸ್ ಪೈ

ಅಧ್ಯಕ್ಷರು, ಆರಿನ್ ಕ್ಯಾಪಿಟಲ್ ಪಾರ್ಟನರ್ಸ್

ಯಶ್ ಬೇಡ್ ಹೆಡ್ ಆಫ್ ರೀಸರ್ಚ್ 3ಒನ್4 ಕ್ಯಾಪಿಟಲ್

2014-2019ಕ್ಕೆ ಹೋಲಿಸಿದರೆ ಜಿಡಿಪಿಯು ಸರಾಸರಿ ಶೇಕಡಾ 7.4ರಷ್ಟು ಏರಿಕೆಯಾಗಿರುವುದರಿಂದ, ಗ್ರಾಹಕರ ಬೇಡಿಕೆ ಹಾಗೂ ಸೂಕ್ತ ಹೂಡಿಕೆಗಳ ಕೊರತೆಯಿಂದಾಗಿ ಭಾರತದ ಆರ್ಥಿಕತೆಯ ಬೆಳವ ಣಿಗೆಯ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಈ ಕೊರತೆಯನ್ನು ಸಮರ್ಥ ವಾಗಿ ನಿಭಾಯಿಸುವ ಜವಾಬ್ದಾರಿಯು ಈ ಸಲದ ಬಜೆಟ್ ಮೇಲಿತ್ತು. ಆದ್ದರಿಂದ ಇದು ಎಲ್ಲ ದೃಷ್ಟಿಯಲ್ಲಿಯೂ ತುಂಬಾ ನಿರೀಕ್ಷೆ ಹೊತ್ತಿರುವ ಬಜೆಟ್ ಆಗಿತ್ತು. ವೈಯಕ್ತಿಕ ಆದಾಯ ತೆರಿಗೆಗೆ ಐದು ಲಕ್ಷ ರೂ.ಗಳ ಮಿತಿ ಹಾಕಿರುವುದು ತುಂಬಾ ಒಳ್ಳೆಯ ನಿರ್ಧಾರ. ಇದರಿಂದಾಗಿ, ಜನರು ದುಡಿದ ಹಣ ಅವರ ಕೈಸೇರುವಂತೆ ಆಗಿದೆ. ಮಧ್ಯಮ ವರ್ಗದ ಜನರಿಗೆ ಇದರಿಂದ ತುಂಬಾ ಅನುಕೂಲವಾಗಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ಅರ್ಥ ಮಾಡಿಕೊಂಡು ಹಣಕಾಸಿನ ಕೊರತೆಯನ್ನು ಸಡಿಲಿಸಿರುವುದು ಕೂಡ ವಿವೇಕಯುತ ಹೆಜ್ಜೆಯಾಗಿದೆ.

ಇನ್ನು ಮೂಲಸೌಕರ್ಯದ ವಿಷಯಕ್ಕೆ ಬರುವುದಾದರೆ, ಸಾರ್ವಭೌಮ ಸಂಪತ್ತು ನಿಧಿಗಳಿಗೆ ನೂರಕ್ಕೆ 100ರಷ್ಟು ವಿನಾಯಿತಿ ನೀಡುವುದು ಭಾರತಕ್ಕೆ ದೀರ್ಘಾವಧಿಯ ಹಣವನ್ನು ದೊಡ್ಡ ಪ್ರಮಾಣದಲ್ಲಿ ಪಡೆಯಲು ಅಗತ್ಯವಾಗಿತ್ತು. ಬಜೆಟ್​ನಲ್ಲಿ ಈ ಆಶಯ ಈಡೇರಿದೆ. ಅಂತೆಯೇ, ಭಾರತೀಯ ಜೀವವಿಮಾ ನಿಗಮದ ಷೇರು ಮಾರಾಟ ಪ್ರಸ್ತಾವವು ಬಜೆಟ್​ನಲ್ಲಿ ತುಂಬಾ ಮಹತ್ವ ಪಡೆದಿದ್ದು ದಕ್ಷ ಆಡಳಿತ ನಡೆಸಲು ಇದು ಸಹಕಾರಿಯಾಗಿದೆ. ಕಾರ್ಪೆರೇಟ್ ಬಾಂಡ್​ಗಳಲ್ಲಿ ಎಫ್​ಪಿಐ ಮಿತಿ ಹೆಚ್ಚಿಸುವುದರಿಂದ ಬಾಂಡ್ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಸಹಕಾರಿಯಾಗಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ, ಸ್ಟಾರ್ಟ್​ಅಪ್​ಗಳಿಗೆ ಮಾತ್ರ ಬಜೆಟ್ ನಿರಾಸೆ ಮೂಡಿಸಿದೆ. ಸ್ಟಾರ್ಟ್​ಅಪ್ ವಲಯವು ಮೋದಿ ಸರ್ಕಾರದಿಂದ ಮೂರು ಪ್ರಮುಖ ನಿರೀಕ್ಷೆಗಳನ್ನು ಹೊಂದಿತ್ತು, ಮೊದಲನೆಯದು, ಇಎಸ್​ಒಪಿ ಸಮಸ್ಯೆಯ ಪರಿಹಾರ. ಆದರೆ ಇದನ್ನು ಭಾಗಶಃ ಮಾತ್ರ ನಿವಾರಿಸಲಾಗಿದೆ. ಎರಡನೆಯದು, ಭಾರತೀಯ ಮತ್ತು ವಿದೇಶಿ ಹೂಡಿಕೆದಾರರ ನಡುವಿನ ಬಂಡವಾಳ ಲಾಭದ ಮೇಲೆ ತೆರಿಗೆ ಸಮಾನತೆ. ಕೊನೆಯದಾಗಿ

ಸ್ಟಾರ್ಟ್​ಅಪ್​ಗಳಿಗೆ ಟಿಡಿಎಸ್ ಕಡಿತಗೊಳಿಸುವುದು. ಆದರೆ ಇದಾವುದೂ ಬಜೆಟ್​ನಲ್ಲಿ ಈಡೇರಲಿಲ್ಲ. ಇವುಗಳ ಹೊರತಾಗಿಯೂ, ಒಟ್ಟಾರೆಯಾಗಿ ಹೇಳುವುದಾದರೆ ದೇಶದ ಆರ್ಥಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡರೆ ಇದು ಉತ್ತಮ ಬಜೆಟ್ ಆಗಿದೆ. ಆದಾಗ್ಯೂ, ಇದು ಇನ್ನೂ ಉತ್ತಮ ಬಜೆಟ್ ಆಗುವ ಸಾಧ್ಯತೆ ಇತ್ತು.