ನ್ಯೂಸ್

ಡ್ರಗ್ಸ್ ಮಾಫಿಯಾ ಮುಖ್ಯಮಂತ್ರಿ ಕೊಡುಗೆಯೇ?

ಮೈಸೂರಿನ ರಿಂಗ್ ರೋಡ್ ಬಳಿ ಡ್ರಗ್ಸ್ ಮಾಫಿಯ ತಲೆ ಎತ್ತಿದೆ. ಆ ಜಾಗ ಕೊಟ್ಟವರು ಯಾರು? ಅಲ್ಲಿ ನಡೆಸುತ್ತಿದ್ದ ಗ್ಯಾರೇಜ್ ಯಾರದ್ದು? ಸಿಎಂ ತವರಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಏನು ಮಾಡುತ್ತಿದ್ದರು ಎಂದು ಆರ್. ಅಶೋಕ್ ಕಿಡಿಕಾರಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ನಮ್ಮಪ್ಪ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಅಂತ ಯತೀಂದ್ರ ಅವರ ಅಪ್ಪನನ್ನು ಹೊಗಳಿದರು. ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಸಿಎಂ ಕೊಡುಗೇನಾ? ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಡ್ರಗ್ಸ್ ಸೀಜ್ ಮಾಡಿದ್ದಾರೆ. ಈ ಸರ್ಕಾರ ಏನು ಕತ್ತೆ ಕಾಯುತ್ತಿದೆಯೋ? ಎಂದು ಆಕ್ರೋಶವ್ಯಕ್ತಪಡಿಸಿದರು.

ಪೊಲೀಸರು ಪಾಪ ಏನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿದ್ದಾರೆ. ಗೃಹ ಇಲಾಖೆ ನಿದ್ದೆ ಮಾಡುತ್ತಿದೆ. ಲೋಕಲ್ ಸಪೋರ್ಟ್ ಇಲ್ಲದೆ ಇದೆಲ್ಲವೂ ನಡೆಯುತ್ತಾ?. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮೈಮರೆತಿದೆ. ಕುರ್ಚಿ ಜಗಳದಲ್ಲಿ ಕಾನೂನು ಮರೆತ್ತಿದ್ದಾರೆ. ಮೈಸೂರಿನಲ್ಲಿ ಡ್ರಗ್ಸ್ ಸಿಗುತ್ತಿದೆ ಅಂದರೆ ನೋವಿನ ಸಂಗತಿ. ಡ್ರಗ್ಸ್ ಮಾಫಿಯಾ ತಲೆ ಎತ್ತಿರೋದು ಕೂಡ ಸಿಎಂ ಅವರ ಒಂದು ಸಾಧನೆ ಎಂದು ವ್ಯಂಗ್ಯವಾಡಿದರು.