ನ್ಯೂಸ್

ಡಿಸಿಸಿ ಬ್ಯಾಂಕ್‌ಗೆ ಗೋವಿಂದೇಗೌಡ, ಮಂಜುನಾಥರೆಡ್ಡಿ, ರೂಪಕಲಾ ಶಶಿಧರ್ ರವರಿಂದ ನಾಮಪತ್ರಗಳ ಸಲ್ಲಿಕೆ / ಮೇ.೨೦ಕ್ಕೆ ನಾಮಪತ್ರ ಸಲ್ಲಿಕೆ ಕೊನೆ ದಿನ / ವಿವಿಧಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಮೇ.೨೮ ರಂದು ನಡೆಯಲಿರುವ ಚುನಾವಣೆಗೆ ಭಾನುವಾರದಿಂದ ನಾಮಪತ್ರಗಳ ಸಲ್ಲಿಕೆ ಪ್ರಾರಂಭಗೊAಡಿದ್ದು, ೩ ಜನ ಅಭ್ಯರ್ಥಿಗಳು ಇಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಡಿ.ಸಿ.ಸಿ.ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಗೌಡ ಮರು ಆಯ್ಕೆಗಾಗಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದ ಕೆ.ಜಿ.ಎಫ್.ಶಾಸಕಿ ರೂಪಕಲಾ ಎಂ.ಶಶಿಧರ್ ಮರು ಆಯ್ಕೆ ಬಯಸಿ ಕೆ.ಜಿ.ಎಫ್.ನ ಕೆಂಪಾಪುರ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿAದ ಚುನಾವಣೆಗೆ ನಾಮಪತ್ರವನ್ನು ಎರಡು ಸೆಟ್ಟುಗಳಲ್ಲಿ ಸಲ್ಲಿಸಿದ್ದಾರೆ.

ಗುಡಿಬಂಡೆ ತಾಲ್ಲೂಕಿನ ಹೆಚ್.ಎನ್.ಮಂಜುನಾಥರೆಡ್ಡಿ, ಗುಡಿಬಂಡೆ ತಾಲ್ಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಾಮಪತ್ರವನ್ನು ಸಲ್ಲಿಸಿದ್ದಾರೆ. ರೂಪಕಲಾ ಎಂ.ಶಶಿಧರ್ ರವರ ಎರಡು ಸೆಟ್ ನಾಮಪತ್ರ ಸೇರಿ ಒಟ್ಟು ೪ ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಮೇ ೨೦ ಕೊನೆ ದಿನಾವಾಗಿದ್ದು, ಮೇ.೨೧ ರಂದು ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ವಾಪಸ್ಸು ಪಡೆಯಲು ಮೇ.೨೩ರ ವರೆವಿಗೂ ಕಾಲಾವಕಾಶ ನೀಡಲಾಗಿದೆ.

ಕಾಂಗ್ರೇಸ್ ಜೆಡಿಎಸ್. ಬಿಜೆಪಿ ಯಿಂದ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು :

ಮೂರು ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆಗೆ ಮುಖಂಡರ ನೇತೃತ್ವದಲ್ಲಿ ಕಸರತ್ತುಗಳು ನಡೆಯುತ್ತಿವೆ. ಕಾಂಗ್ರೇಸ್‌ನಿAದ ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದ್ದು, ಮಂಗಳವಾರ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟವಾದ ನಂತರ ನಾಮಪತ್ರ ಸಲ್ಲಿಸುವ ಕೊನೆ ದಿನದಂದು ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವ ಕಾರಣ ಇಬ್ಬರೂ ಒಟ್ಟಿಗೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾಗಿದೆ. ಭಾನುವಾರ ಸಂಜೆ ಕೋಲಾರದಲ್ಲಿ ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ನಿವಾಸದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಅಭ್ಯರ್ಥಿಗಳಾಗುವವರ ಮಾಹಿತಿ ಪಡೆಯಲಾಯಿತು ಎನ್ನಲಾಗಿದೆ.

ಸಭೆಯನ್ನು ಸಂಸದ ಎಂ.ಮಲ್ಲೇಶ್‌ಬಾಬು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಮಾಲೂರಿನ ಜೆಡಿಎಸ್ ಪರಾಭವ ಅಭ್ಯರ್ಥಿ ರಾಮೇಗೌಡ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಮೌನಿ, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ಕೋಚಿಮುಲ್ ಮಾಜಿ ನಿರ್ದೇಶಕ ವಡಗುರು ಹರೀಶ್ ಮುಂತಾದವರುಗಳ ಸಮ್ಮುಖದಲ್ಲಿ ಅಭ್ಯರ್ಥಿಗಳು ಆಗಲು ಇಚ್ಛೆ ವ್ಯಕ್ತಪಡಿಸುವವರ ಹೆಸರುಗಳನ್ನು ಪಡೆಯಲಾಯಿತು ಎನ್ನಲಾಗಿದೆ.

ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆಯೋ ಅಥವಾ ಸ್ಥಳೀಯ ಸಂಸ್ಥೆಯ ಚುನಾವಣೆಯಾದ ಕಾರಣ ಆಯಾ ಪಕ್ಷಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆಯೋ ಕಾದು ನೋಡಬೇಕಾಗಿದೆ.

ರೂಪಕಲಾ ಎಂ.ಶಶಿಧರ್ ಅವಿರೋಧ ಆಯ್ಕೆ ಆಗುವುದು ಖಚಿತ :

ಕೆ.ಜಿ.ಎಫ್. ಕ್ಷೇತ್ರದಲ್ಲಿ ೩ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮಾತ್ರ ಚುನಾವಣೆಗೆ ಅರ್ಹವಾಗಿರುವ ಕಾರಣ ಒಂದು ಸಹಕಾರ ಸಂಘದಿAದ ಡೆಲಿಗೇಷನ್‌ಗೆ ಅನರ್ಹವಾಗಿರುವ ಕಾರಣ ಇರುವ ೨ ಸಹಕಾರ ಸಂಘಗಳಿAದ ಮಾತ್ರ ಚುನಾವಣೆಗೆ ಸಲ್ಲಿಸಲು ಅವಕಾಸ ಇರುವುದರಿಂದ ರೂಪಕಲಾ ಶಶಿಧರ್ ರವರ ಅವಿರೋಧ ಆಯ್ಕೆ ಆಗುವುದು ಖಚಿತ ಆದಂತೆ ಆಗಿದೆ.

ಚಿತ್ರ ೧೮ ಕೆ.ಎಲ್.ಆರ್. ೦೪ : ಡಿ.ಸಿ.ಸಿ.ಬ್ಯಾಂಕ್ ಚಿತ್ರ