ಶೃಂಗೇರಿ ಡಿಸಿಸಿ ಬ್ಯಾಂಕ್‌ನಲ್ಲಿ ಆರು ಸಂಘದ ಸಿಇಒಗಳಿಗೆ ಚೆಕ್ ಅನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೇರುಬೈಲು ಶಂಕರಪ್ಪ ವಿತರಿಸಿದರು. ರಾಜೇಂದ್ರ, ನವೀನ್, ಸುರೇಶ್ ಇದ್ದರು. 
ನ್ಯೂಸ್

ಡಿಸಿಸಿ ಬ್ಯಾಂಕ್‌ಗೆ 18 ಕೋಟಿ ರೂ. ಲಾಭ

ಶೃಂಗೇರಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಾಭಾಂಶದಲ್ಲಿ ತಾಲೂಕಿನ ಎಲ್ಲಾ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಿಗೆ ಮೂಲ ಸೌಕರ್ಯ ಹಾಗೂ ಪೀಠೋಪಕರಣ ವ್ಯವಸ್ಥೆಗೆ ತಾಲೂಕಿಗೆ 10 ಲಕ್ಷ ರೂ. ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೇರುಬೈಲ್ ಶಂಕರಪ್ಪ ಹೇಳಿದರು.

ಪಟ್ಟಣದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ತಾಲೂಕಿನ ಸಹಕಾರ ಸಂಘಗಳಿಗೆ ಚೆಕ್ ವಿತರಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ 18 ಕೋಟಿ ರೂ. ಲಾಭ ಗಳಿಸಿದೆ. ಸೆ.22ರಂದು ಬ್ಯಾಂಕಿನ ಸರ್ವ ಸದಸ್ಯರ ಸಭೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ಸಾಲದ ವಸೂಲಾತಿ ಪ್ರಮಾಣ ಶೇ.98 ಆಗಿದ್ದು 1276 ಕೋಟಿ ರೂ. ಠೇವಣಿ ಹೊಂದಿದೆ ಎಂದರು.
ಸಿಆರ್‌ಎಆರ್ 10.46 ಆಗಿದ್ದು ಬ್ಯಾಂಕ್ ಸದೃಢವಾಗಿದೆ. ಸ್ಥಳೀಯ ಶಾಖೆಯಲ್ಲಿ 59.44 ಲಕ್ಷ ರೂ. ಲಾಭ ಗಳಿಸಿದ್ದು 52.74 ಲಕ್ಷ ರೂ. ಸಾಲ ನೀಡಲಾಗಿದೆ. ಕೃಷಿ ಸಾಲ 35.26 ಲಕ್ಷ ರೂ. ನೀಡಲಾಗಿದೆ. ತಾಲೂಕಿನ ಎಲ್ಲಾ ಸಂಘಗಳು ಉತ್ತಮ ನಿರ್ವಹಣೆ ಮಾಡುತ್ತಿದ್ದು ವಸೂಲಾತಿ ಪ್ರಮಾಣವೂ ತೃಪ್ತಿಕರವಾಗಿದೆ ಎಂದರು.
6 ಸಂಘದ ಸಿಇಒ ಅವರಿಗೆ ಚೆಕ್ ನೀಡಲಾಯಿತು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್, ಮೇಲ್ವಿಚಾರಕ ದೀಪಕ್, ಸಂಘದ ಸಿಇಒ ನವೀನ್, ರೋಹಿಣಿ, ದೇವೇಂದ್ರ, ಸುರೇಶ್, ರಾಜೇಂದ್ರ, ರಜನಿ ಇದ್ದರು.