ನ್ಯೂಸ್

ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನದ ಅಕಾಂಕ್ಷಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ / ಡಿಸಿಸಿ ಬ್ಯಾಂಕಿನಲ್ಲಿ ಹಾಗಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಚುನಾವಣೆಗೆ ಸ್ಪರ್ದೆ / ಶಾಸಕ ಕೊತ್ತೂರು ಮಂಜುನಾಥ್,

ವಿಜಯವಾಣಿ ಸುದ್ದಿಜಾಲ ಕೋಲಾರ

ಹದಗೆಟ್ಟಿರುವ ಡಿಸಿಸಿ ಬ್ಯಾಂಕಿನ ಆಡಳಿತವನ್ನು ಸರಿಪಡಿಸಿ ಹೊಸ ರೂಪವನ್ನು ನೀಡಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ದಿಸುತ್ತಿದ್ದೇನೆ, ನಾನು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿಯ ಉಪವಿಭಾಗಾಧಿಕಾರಿಗಳಿಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾದ್ಯಮದವರೊಂದಿಗೆ ಮಾತನಾಡಿ, ನಮ್ಮಲ್ಲಿ ಯಾವುದೇ ಬಣ ಇಲ್ಲ, ಆಯಾ ತಾಲ್ಲೂಕಿನ ಶಾಸಕರುಗಳು ತೀರ್ಮಾನ ಮಾಡಿಕೊಂಡು ಹೈಕಮಾಂಡ್ ಸೂಚನೆಯಂತೆ ಸ್ಫರ್ದಿಸಲಾಗುತ್ತಿದೆ ಎಂದರು.

ಬೇರೆಯವರ ವಿಚಾರ ನನಗೆ ಗೊತ್ತಿಲ್ಲ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಮತ್ತು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಸುಧಾಕರ್ ಅವರ ತೀರ್ಮಾನದಂತೆ ಡಿಸಿಸಿ ಬ್ಯಾಂಕಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಅವರುಗಳು ಮಾತ್ರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ನಾನು ಸ್ಪರ್ದಿಸುವಂತೆ ತೀರ್ಮಾನವಾಗಿತ್ತು, ಅದರಂತೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

ನಾನು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ನಿರ್ದೇಶಕ ಸ್ಥಾನದ ಅಕಾಂಕ್ಷಿಯಷ್ಟೆ. ಗೆದ್ದ ನಂತರ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಯಾರು ಎಂದು ತಿಳಿಯಲಿದೆ. ನಾನು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಳಬಾಗಿಲು ಟಿಎಪಿಸಿಎಂಎಸ್ ಅಧ್ಯಕ್ಷನಾಗಿ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ದಿಸುತ್ತಿಲ್ಲ. ಡಿಸಿಸಿ ಬ್ಯಾಂಕಿನಲ್ಲಿ ಹಾಗಿರುವ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಹಾಗೂ ಡಿಸಿಸಿ ಬ್ಯಾಂಕಿಗೆ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಚುನಾವಣೆಗೆ ಸ್ಪರ್ದಿಸಲಾಗುತ್ತಿದೆ. ಈ ಬಾರಿ ಒಳ್ಳೆಯ ಆಡಳಿತ ಮಂಡಳಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದರು.

ಡಿಸಿಸಿ ಬ್ಯಾಂಕಿನಿAದ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿಲ್ಲ. ಹಾಗಾಗಿ ಹೊಸದಾಗಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಹಿಳಾ ಸ್ವ-ಸಹಾಯ ಸಂಘಗಳು ಸಾಲ ಪಡೆದು ಮರುಪಾವತಿ ಮಾಡುತ್ತಿಲ್ಲ. ಅದನ್ನೆಲ್ಲಾ ವಸೂಲಾತಿ ಮಾಡಿ, ಉತ್ತಮ ರೀತಿಯಲ್ಲಿ ಬ್ಯಾಂಕನ್ನು ನಡೆಸಿಕೊಂಡು ಹೋಗುವ ವಿಶ್ವಾಸವಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹಂತ ಹಂತವಾಗಿ ಬಗೆಹರಿಸಿಕೊಂಡು ಡಿಸಿಸಿ ಬ್ಯಾಂಕಿನ ಹಿಂದಿನ ಗತವೈಭವವನ್ನು ಮರುಕಳುಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಸದಸ್ಯ ಅಂಬರೀಶ್, ಸೂರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ ಶಿವಕುಮಾರ್, ಮುಖಂಡರಾದ ಬಾಲು, ಮೈಲಾಂಡಹಳ್ಳಿ ಮುರಳಿ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲ್ ಗೌಡ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ನಾಗಲಾಪುರ ವೀರೇಂದ್ರ ಪಾಟೀಲ್ ಮುಂತಾದವರು ಇದ್ದರು

ಬಾಕ್ಸ್

ಇರುವುದನ್ನು ಇದ್ದಂಗೆ ಮಾತನಾಡುವುದು ನನ್ನ ಹಾಬಿ, ಯಾರನ್ನು ನಂಬಿ ನಾನು ಬದುಕುತ್ತಿಲ್ಲ. ನನ್ನನ್ನು ನಂಬಿ ನಾನು ಬದುಕುತ್ತಿದ್ದೇನೆ. ಸಮಯ ಬಂದಾಗ ಎಲ್ಲಾ ವಿಷಯಗಳ ಕುರಿತು ಮಾತನಾಡುವೆ. ನಾನು ಯಾರ ಹಣ ಲಪಾಟಯಿಸಿಲ್ಲ, ಯಾರಿಗೂ ಮೋಸ ಮಾಡಿಲ್ಲ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ನಾನು ನೋಡಿಲ್ಲ ನೋಡಿ ಮಾತನಾಡುತ್ತೇನೆ ಎಂದು ಆಪರೇಷನ್ ಸಿಂಧೂರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಕ್ಷಮೆಯಾಚನೆ ಮಾಡುವ ಬಗ್ಗೆ ಯರ‍್ಯಾರು ಏನು ಹೇಳಿದ್ದಾರೆಯೋ ನೋಡಿ ಮಾತನಾಡುತ್ತೇನೆ. ಸಿಂಧೂರ ಆಪರೇಷನ್ ಕುರಿತು ಹೇಳಿಕೆಯಿಂದ ನನಗೇನೂ ಮುಜುಗರ ಆಗಿಲ್ಲ ಎಂದರು.

-ಕೊತ್ತೂರು ಮಂಜುನಾಥ್, ಶಾಸಕ

ಚಿತ್ರ ೨೦ ಕೆ.ಎಲ್.ಆರ್. ೦೨ : ಶಾಸಕ ಕೊತ್ತೂರು ಮಂಜುನಾಥ್ ಡಿ.ಸಿ.ಸಿ.ಬ್ಯಾಂಕ್‌ಗೆ ಮಂಗಳವಾರ ನಾಮಪತ್ರ ಸಲ್ಲಿಸಿ, ಎಂ.ಎಲ್.ಸಿ. ಅನಿಲ್‌ಕುಮಾರ್, ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಮುಂತಾದವರು ಇದ್ದರು.