ನ್ಯೂಸ್

ಡಿಡಿಪಿಐ ಕಛೇರಿ ಗೋಡೆಗೆ ಅಂಟಿಸಲಾಗಿದ್ದ ಶ್ರೀಕೃಷ್ಣನ ಗೀತಸಾರ ಬ್ಯಾನರ್ ಹರಿದು ಹಾಕಿದ ವಿಡಿಯೋ ವೈರಲ್ / ಯಾದವ ಸಂಘ ಖಂಡನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದ ಡಿಡಿಪಿಐ ಕಛೇರಿಯ ಗೋಡೆಗೆ ಅಂಟಿಸಲಾಗಿದ್ದ ಶ್ರೀಕೃಷ್ಣನ ಗೀತಸಾರ ಬ್ಯಾನರ್ ಹರಿದು ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಗೀತಸಾರಕ್ಕೆ ಅಪಮಾನ ಮಾಡಿರುವುದನ್ನು ಯಾದವ ಸಂಘ ಖಂಡನೆ ಮಾಡಿದೆ.

ಅಮಿತ್‌ಷಾ ಅಂಬೇಡ್ಕರ್ ರವರನ್ನು ಅವಹೇಳನವಾಗಿ ಮಾತನಾಡಿದ್ದಾರೆಂದು ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಜ.೩ ರಂದು ಕೋಲಾರ ಬಂದ್‌ಗೆ ಕರೆ ನೀಡಿದ್ದ ವೇಳೆ ದಲಿತಪರ ಸಂಘಟನೆಗಳ ಕೆಲವು ಮುಖಂಡರು ಡಿಡಿಪಿಐ ಕಛೇರಿಗೆ ನುಗ್ಗಿದರು.

ಆ ಸಂದರ್ಭದಲ್ಲಿ ಗೋಡೆಗೆ ಶ್ರೀಕೃಷ್ಣನ ಗೀತಸಾರದ ಬ್ಯಾನರ್‌ನ್ನು ಅಂಟಿಸಲಾಗಿತ್ತು. ಅಂಬೇಡ್ಕರ್ ರವರ ಪೀಠಿಕೆ ಅಳವಡಿಸದೆ ಗೀತಸಾರವನ್ನು ಅಳವಡಿಸಿರುವ ಬಗ್ಗೆ ಡಿಡಿಪಿಐ ಕಛೇರಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಗೀತಸಾರ ಬ್ಯಾನರ್‌ನ್ನು ಹರಿದು ಹಾಕಿದರು.

ಗೀತಸಾರದ ಬ್ಯಾನರ್ ಹರಿದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಖಂಡಿಸಿರುವ ಯಾದವ ಸಂಘ ಶ್ರೀಕೃಷ್ಣನಿಗೆ ಅಪಮಾನ ಮಾಡಿದಂತೆ ಆಗಿದೆ ಎಂದಿದ್ದಾರೆ.

ಚಿತ್ರ ೦೬ ಕೆ.ಎಲ್.ಆರ್. ೦೯ : ಡಿಡಿಪಿಐ ಕಛೇರಿ ಗೋಡೆಗೆ ಅಂಟಿಸಲಾಗಿದ್ದ ಶ್ರೀಕೃಷ್ಣನ ಗೀತಸಾರ ಬ್ಯಾನರ್ ಬಗ್ಗೆ ಪ್ರತಿಭಟನಾಕಾರರು ಡಿಡಿಪಿಐ ಕಛೇರಿ ಸಿಬ್ಬಂದಿಯೊAದಿಗೆ ವಾಗ್ವಾದ ನಡೆಸಿ ಬ್ಯಾನರ್ ಹರಿದು ಹಾಕಿದರು.