ಸುಣ್ಣಬಣ್ಣವಿಲ್ಲದೆ ಸೊರಗುತ್ತಿರುವ ಕಟ್ಟಡ ಎದ್ದು ಕಾಣುತ್ತಿರುವ ಅನೈರ್ಮಲ್ಯ
ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಹೃದಯ ಭಾಗದಲ್ಲಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸುಣ್ಣ ಬಣ್ಣವಿಲ್ಲದೆ ಸೊರಗುತ್ತಿದ್ದು, ಕಚೇರಿ ಸುತ್ತಲೂ ಸ್ವಚ್ಛತೆ ಕಾಣದಂತಾಗಿದೆ. ಶೌಚಗೃಹವೂ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ.
ಸ್ವಚ್ಛ ಭಾರತದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಇರುವ ಉಪನಿರ್ದೇಶಕರ ಕಚೇರಿ ಸುತ್ತ ಅನೈರ್ಮಲ್ಯ ಎದ್ದು ಕಾಣುತ್ತಿದೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಇರುವ ಜಿಲ್ಲಾ ಕೇಂದ್ರದ ಮುಖ್ಯಸ್ಥರ ಕಚೇರಿ ಈ ರೀತಿಯಾದರೆ ಇನ್ನು ಶಾಲೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಾರೆಯೇ ಎಂದು ಸಾರ್ವಜನಿಕರ ಪ್ರಶ್ನೆ.
ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ದಶಕಗಳಿಂದ ಸುಣ್ಣಬಣ್ಣವಿಲ್ಲದೆ ಸೊರಗುತ್ತಿದೆ. ಕಿಟಕಿ ಗಾಜುಗಳು ಒಡೆದು ಹೋಗಿವೆ. ಶೌಚಗೃಹ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ. ಮೂತ್ರ ವಿಸರ್ಜನೆಗಾಗಿ ನಿರ್ಮಿಸಿರುವ ಶೌಚಗಳು ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿವೆ.
ನೀರು ಇಲ್ಲದೆ ನಲ್ಲಿಗಳು ಬಂದಾಗಿದ್ದು, ಶೌಚಕ್ಕಾಗಿ ಇರುವ 3 ಶೌಚಗೃಹಗಳಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಬಾಗಿಲುಗಳಿಗೆ ಚಿಲಕಗಳಿಲ್ಲದೆ ಉದುರಿಹೋಗಿವೆ. ಇನ್ನು ಪಕ್ಕದಲ್ಲೇ ಇರುವ ಮಹಿಳಾ ಶೌಚಗೃಹದಲಲ್ಲಿ ಸ್ವಲ್ಪ ಮಟ್ಟಿಗೆ ಸ್ವಚ್ಛತೆ ಕಾಣುತ್ತಿದೆ. ಪುರುಷರ ಶೌಚಗೃಹದ ಕೊಠಡಿಯಲ್ಲಿಯೇ ನಿರುಪಯುಕ್ತ ವಸ್ತುಗಳ ರಾಶಿಗಳನ್ನು ಹಾಕಲಾಗಿದೆ.
ಉಪನಿರ್ದೇಶಕರ ಕಚೇರಿ ಸುತ್ತಲೂ ವಾರಗಟ್ಟಲಾದರೂ ಕಸ ಗುಡಿಸುತ್ತಿಲ್ಲ. ಮರಗಳಲ್ಲಿ ಉದುರಿರುವ ಎಲೆಗಳ ರಾಶಿ ಬಿದ್ದಿವೆ. ಆಕಸ್ಮಿಕವಾಗಿ ಎಲೆಗಳಿಗೆ ಬೆಂಕಿ ಬಿದ್ದರೆ ಇಡೀ ಕಚೇರಿಗೆ ಬೆಂಕಿ ಆವರಿಸಿಕೊಳ್ಳುತ್ತದೆ. ಕಿಟಕಿ ಗಾಜುಗಳು ಒಡೆದಿರುವುದರಿಂದ ಕಚೇರಿಯೊಳಗೆ ಇಲಿ ಹೆಗ್ಗಣಗಳಿಗೆ ಅವಾಸಸ್ಥಾನವಾಗಿದೆ. ಒಟ್ಟಾರೆಯಾಗಿ ಇಡೀ ಕಚೇರಿ ನಿರ್ವಹಣೆ ವಾಯವಾಗಿದೆ.
ಉಪನಿರ್ದೇಶಕರ ಕಚೇರಿ ಹದಯಭಾಗದಲ್ಲಿ ಇರುವುದರಿಂದ ಸಾರ್ವಜನಿಕರು ಶೌಚಗೃಹವನ್ನು ಉಪಯೋಗಿಸಿಕೊಳ್ಳುತ್ತಾರೆ. ಇದರಿಂದಾಗಿ ಸಮಸ್ಯೆ ಗಂಭೀರ ಪಡೆದುಕೊಂಡಿದೆ ಎಂಬುದು ಆರೋಪ. ಇನ್ನೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತಹ ಇಲಾಖೆಯಲ್ಲಿ ಸ್ವಚ್ಛತೆ ವಾಯಾವಾಗಿರುವುದು ವಿಪರ್ಯಾಸ.
ಕೋಟ್))
ಕಚೇರಿರಿಗೆ ಸುಣ್ಣಬಣ್ಣ ಬಳಿಯಲು ಅನುದಾನದ ಕೊರತೆಯಿದೆ. ಈಗಾಗಲೇ ನಿರ್ವಹಣೆಗೆ ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೊರ ಗುತ್ತಿಗೆ ಆಧಾರದ ಮೇಲೆ ಶೌಚಾಲಯವನ್ನು ಆಗಾಗ ಸ್ವಚ್ಛಗೊಳಿಸಲಾಗುತ್ತಿದೆ. ಹೊಸ ಶೌಚಾಲಯ ನಿರ್ವಾಣ ವಾಡಬೇಕಾಗಿದೆ. ಅದಕ್ಕೂ ಸಹ ಅನುದಾನದ ಕೊರತೆಯಿದೆ. ಕಛೇರಿ ಆವರಣದಲ್ಲಿ ನೀಲಗಿರಿ ಸೇರಿದಂತೆ ಇತರೆ ಮರಗಳು ಇರುವುದರಿಂದ ಎಲೆಗಳು ಉದುರುತ್ತಲೇ ಇರುತ್ತವೆ. ವಾರಕ್ಕೊಂದು ಬಾರಿ ಸ್ವಚ್ಛಗೊಳಿಸಲಾಗುತ್ತಿದೆ.
ಕಷ್ಣಮೂರ್ತಿ, ಡಿ.ಡಿ.ಪಿ.ಐ. ಕೋಲಾರ.
ಕೋಟ್
ಶಿಕ್ಷಣ ಇಲಾಖೆಗೆ ಶಾಲೆಗಳ ಮತ್ತು ಕಚೇರಿಗಳ ನಿರ್ವಹಣೆಗೆ ಪ್ರತಿವರ್ಷ ಅನುದಾನ ಬರುತ್ತದೆ. ನಗರದ ಹೃದಯಭಾಗದಲ್ಲಿರುವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಸುಣ್ಣಬಣ್ಣ ಬಳಿದು ವರ್ಷಗಳೇ ಕಳೆದಿವೆ. ಕಚೇರಿ ಸುತ್ತಲೂ ಕಸದ ರಾಶಿ ಬಿದ್ದಿವೆ. ಸ್ವಚ್ಛತೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಶಿಕ್ಷಕರ ಜಿಲ್ಲಾ ಕೇಂದ್ರವೇ ಈ ರೀತಿ ಇದ್ದರೆ ಇನ್ನು ಶಿಕ್ಷಕರು ತಮ್ಮ ಶಾಲೆಗಳಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡುತ್ತಾರೆ. ಶಿಕ್ಷಕರ ಮುಖ್ಯಸ್ಥನ ಕಚೇರಿಯೇ ಸ್ವಚ್ಛತೆ ಇಲ್ಲದೇ ಇರುವಾಗ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಕೇಳುವ ನೈತಿಕತೆ ಡಿ.ಡಿ.ಪಿ.ಐ.ಗೆ ಇಲ್ಲದಂತಾಗಿದೆ.
ಆಟೋ ನಾರಾಯಣಸ್ವಾಮಿ, ಗಾಂಧಿನಗರ, ಕೋಲಾರ.
ಚಿತ್ರ 28 ಕೆ.ಎಲ್.ಆರ್. 06 : ಡಿ.ಡಿ.ಪಿ.ಐ.ಕಷ್ಣಮೂರ್ತಿ ಭಾವಚಿತ್ರ
ಚಿತ್ರ 28 ಕೆ.ಎಲ್.ಆರ್. 06ಎ : ಆಟೋ ನಾರಾಯಣಸ್ವಾಮಿ ಭಾವಚಿತ್ರ
ಚಿತ್ರ 28 ಕೆ.ಎಲ್.ಆರ್. 06ಬಿ : ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ಭಾವಚಿತ್ರ
ಚಿತ್ರ 28 ಕೆ.ಎಲ್.ಆರ್. 06ಸಿ : ಉಪನಿರ್ದೇಶಕರ ಕಛೇರಿಯ ಸುತ್ತಲೂ ಸ್ವಚ್ಛತೆ ಇಲ್ಲದೆ ಕಸ ಬಿದ್ದಿರುವುದು.
ಚಿತ್ರ 28 ಕೆ.ಎಲ್.ಆರ್. 06ಡಿ : ಶೌಚಾಲಯದ ಮೂತ್ರ ವಿಸರ್ಜನೆ ಶೌಚಾಲಯ ನಿರ್ವಹಣೆ ಇಲ್ಲದೆ, ನೀರು ಇಲ್ಲದೇ ಇರುವುದು.
ಚಿತ್ರ 28 ಕೆ.ಎಲ್.ಆರ್. 06ಇ : ಶೌಚಾಲಯದ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳ ರಾಶಿ ಬಿದ್ದಿರುವುದು.