ಬಾಗಲಕೋಟೆ: ಜಿಲ್ಲೆಯಲ್ಲಿ ಡಿ.೭ ಮತ್ತು ೮ ರಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿನ ಗ್ರೂಸ್ ಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಜರುಲಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪಿಡಿಒ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ದತೆ ಕುರಿತು ಶುಕ್ರವಾರ ಜರುಗಿದ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಡಿ.೭ ರಂದು ಮಧ್ಯಾಹ್ನ ೨ ರಿಂದ ಸಂಜೆ ೪ ವರೆಗೆ ಕನ್ನಡ ಭಾಷಾ ಪರೀಕ್ಷೆಗೆ ಒಟ್ಟು ೪೩ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ೧೭೧೪೦ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆ ನಗರದ ೨೩ ಪರೀಕ್ಷಾ ಕೇಂದ್ರಗಳಲ್ಲಿ ೯೧೬೯ ಅಭ್ಯರ್ಥಿಗಳು, ಬೀಳಗಿ ನಗರದ ೫ ಪರೀಕ್ಷಾ ಕೇಂದ್ರಗಳಲ್ಲಿ ೨೦೬೪ ಅಭ್ಯರ್ಥಿಗಳು ಹಾಗೂ ಜಮಖಂಡಿ ನಗರದ ೧೩ ಪರೀಕ್ಷಾ ಕೇಂದ್ರಗಳಲ್ಲಿ ೫೯೦೭ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಡಿ.೮ ರಂದು ಜರಗುವ ಸಾಮಾನ್ಯ ಜ್ಞಾನ ಪರೀಕ್ಷೆಗೆ ಒಟ್ಟು ೫೬ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ೨೨೮೫೩ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗಿನ ಅವಽ ಪತ್ರಿಕೆ-೧ ಬೆಳಗ್ಗೆ ೧೦ ರಿಂದ ೧೧.೩೦ ವರೆಗೆ ಮಧ್ಹಾಹ್ನದ ಅವಽ ಪತ್ರಿಕೆ-೨ ಮಧ್ಯಾಹ್ನ ೨ ರಿಂದ ಸಂಜೆ ೪ ವರೆಗೆ ಪರೀಕ್ಷೆ ನಡೆಯಲಿವೆ. ಒಟ್ಟು ನಾಲ್ಕು ತಾಲೂಕಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಬಾಗಲಕೋಟೆ ನಗರದ ೨೬ ಕೇಂದ್ರಗಳಲ್ಲಿ ೯೮೯೨ ಅಭ್ಯರ್ಥಿಗಳು, ಬೀಳಗಿ ನಗರದ ೫ ಕೇಂದ್ರಗಳಲ್ಲಿ ೨೦೬೪ ಅಭ್ಯರ್ಥಿಗಳು, ಜಮಖಂಡಿ ನಗರದ ೧೬ ಕೇಂದ್ರಗಳಲ್ಲಿ ೭೫೩೬ ಅಭ್ಯರ್ಥಿಗಳು ಹಾಗೂ ಮುಧೋಳ ನಗರದ ೯ ಕೇಂದ್ರಗಳಲ್ಲಿ ೩೩೬೦ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್, ಕ್ಯಾಲ್ಕುಲೇಟರ್, ವಾಚ್ ಹಾಗೂ ಇತರೆ ಇಲೆಕ್ಟಾನಿಕ್ ಉಪಕರಣ ಹಾಗೂ ಅಭ್ಯರ್ಥಿಗಳು ಶೂ, ಸಾಕ್ಸ್, ಸ್ವೇಟರ್ ಮತ್ತು ಜರ್ಕಿನ್ ವಸ್ತುಗಳನ್ನು ಧರಿಸಿಕೊಂಡು ಬರುವದನ್ನು ನಿಷೇಽಸಲಾಗಿರುವದರಿಂದ ಕೇಂದ್ರದ ದ್ವಾರದ ಬಳಿ ತಪಾಸಣೆ ಮಾಡಬೇಕಾಗಿರುವದರಿಂದ ಪರೀಕ್ಷೆ ಪಾರಂಭದ ೨ ಗಂಟೆ ಪೂರ್ವದಲ್ಲಿಯೇ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಹಾಜರಾಗಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿಯೊಂದು ಅಧಿಕಾರಿ ಹಾಗೂ ಸಿಬ್ಬಂದಿಗಳು ಪರೀಕ್ಷಾ ಪಾವಿತ್ರತೆಗೆ ದಕ್ಕೆ ಬರದ ರೀತಿಯಲ್ಲಿ ಕೆಲಸ ನಿರ್ವಹಿಸಲು ಡಿಸಿ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಪರೀಕ್ಷೆಯಲ್ಲಿ ಯಾವುದೇ ತರಹದ ಲೋಪ ಆಗದಂತೆ ಮುನ್ನೆಚ್ಚರಿಕೆಯಾಗಿ ಕ್ರಮವಹಿಸಬೇಕು. ಪರೀಕ್ಷೆ ಸುಸೂತ್ರವಾಗಿ ನಡೆಸಲು ಬಂದೋಬಸ್ತಗಾಗಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗುತ್ತಿದೆ. ಸಿಸಿಟಿವಿ, ಬಾಡಿ ಕ್ಯಾಮರಾ, ಜಾಮರ, ಪ್ರಿಸ್ಕಿಂಕ್, ಫೇಸ್ ರಿಕಾಗ್ನಾಷನ್ ಕಾರ್ಯವನ್ನು ಕೆಪಿಎಸ್‌ಸಿ ಇಲಾಖೆಯಿಂದ ನೇಮಕಗೊಂಡ ಎಜೆನ್ಸಿಯವರು ಸಮರ್ಪಕವಾಗಿ ನಿರ್ವಹಿಸಿದ ಬಗ್ಗೆ ದೃಢೀಕರಿಸಿಕೊಳ್ಳಲು ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀಟರ ಪ್ರದೇಶವನ್ನು ನಿಷೇತ ಪ್ರದೇಶವೆಂದು ಘೋಷಿಸಲಾಗುವುದೆಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಎಸ್.ಜಿ.ಮಿರ್ಜಿ ಪರೀಕ್ಷೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಟ್ಟಣಶೆಟ್ಟಿ, ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಎಸ್. ಹಾಲವರ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು, ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.