ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಗೋವಿಂದಯ್ಯ, ಬಂಗವಾದಿ ನಾರಾಯಣಪ್ಪ, ಹರಿಹರ ಆನಂದಸ್ವಾಮಿ, ಪ್ರೊ.ಎಚ್.ಆರ್. ಸಿದ್ದೇಗೌಡ, ಶಿವಣ್ಣ ಇದ್ದರು. 
ನ್ಯೂಸ್

ಡಿ.ದೇವರಾಜ ಅರಸು ಮಾದರಿ ರಾಜಕಾರಣಿ

ಹುಣಸೂರು: ಸಮಾನತೆ ಮತ್ತು ಸ್ವಾತಂತ್ರೃ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎರಡನ್ನೂ ಸಮಾನವಾಗಿ ಕಾಯ್ದುಕೊಳ್ಳಬೇಕಿದೆ ಎಂದು ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಖ್ಯಸ್ಥ ಪ್ರೊ.ಎಚ್.ಗೋವಿಂದಯ್ಯ ಅಭಿಪ್ರಾಯಪಟ್ಟರು.

ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಡಿ.ದೇವರಾಜ ಅರಸು, ಎನ್.ರಾಚಯ್ಯ ಮತ್ತು ಗದ್ದರ್ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೇವರಾಜ ಅರಸು ತಮ್ಮ ಅಧಿಕಾರಾವಧಿಯಲ್ಲಿ ಸಮಾನತೆ ಮತ್ತು ಸ್ವಾತಂತ್ರೃವನ್ನು ಸಮನಾಗಿ ಸರಿದೂಗಿಸಿದರು. ಸ್ವಾತಂತ್ರೃವಿಲ್ಲದೆ ಸಮಾನತೆಯಿಲ್ಲ, ಸಮಾನತೆ ಇದ್ದೂ ಸ್ವಾತಂತ್ರೃವಿಲ್ಲದಿದ್ದರೆ ಅದು ಅರ್ಥಹೀನ. ರಾಜಕಾರಣದಲ್ಲಿ ಇವೆಲ್ಲವನ್ನೂ ಎಚ್ಚರಿಕೆಯಿಂದ ಕಾಯ್ದುಕೊಂಡಿದ್ದ ಡಿ.ದೇವರಾಜ ಅರಸು ಇಂದಿಗೂ ಮಾದರಿ ರಾಜಕಾರಣಿ ಎಂದು ಬಣ್ಣಿಸಿದರು.

ಲೇಖಕ ವಿಕ್ರಂರಾಜೇ ಅರಸ್ ಮಾತನಾಡಿ, ಇಂದಿನ ಹೋರಾಟಗಾರರು, ಅರಸು ಮೈಗೂಡಿಸಿಕೊಂಡಿದ್ದ ಮಾನವ ಪ್ರೇಮ, ತಾಳ್ಮೆ, ಧೈರ್ಯವನ್ನು ಅಳವಡಿಸಿಕೊಂಡು ಹೋರಾಟ ನಡೆಸುವ ಅವಶ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಹರ ಆನಂದಸ್ವಾಮಿ ಮಾತನಾಡಿ, ಸಾಮಾಜಿಕ ಪರಿವರ್ತನೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ರಾಜಕಾರಣದಲ್ಲಿ ದೇವರಾಜ ಅರಸು ಹಾಗೂ ಎನ್.ರಾಚಯ್ಯ ಅವರ ಹೆಜ್ಜೆ ಗುರುತು ರೋಚಕ. ಅದೇ ರೀತಿ ಶೋಷಿತ ವರ್ಗಗಳ ಧ್ವನಿಯಾಗಿ, ಕ್ರಾಂತಿಕಾರಿ ಕವಿಯಾಗಿ ಹೊರಹೊಮ್ಮಿದ ತೆಲಂಗಾಣದ ಗದ್ದರ್ ಹೋರಾಟ ಅವಿಸ್ಮರಣೀಯ ಎಂದರು.

ಡೀಡ್ ಸಂಸ್ಥೆ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ದಲಿತ ಮುಖಂಡ ಬಂಗವಾದಿ ನಾರಾಯಣಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ, ಮೇಲುಕೋಟೆಯ ಸುಮನಸ್ ಕೌಲಗಿ, ಮಹಾತ್ಮ ಗಾಂಧಿ ಟ್ರಸ್ಟ್‌ನ ಅನುಷಾ, ಹೊರಳವಾಡಿ ನಂಜುಂಡಸ್ವಾಮಿ ಮಾತನಾಡಿದರು. ಆದಿವಾಸಿ ಮುಖಂಡರಾದ ಪಿ.ಕೆ.ರಾಮು, ಹರ್ಷ, ಆದಿಜಾಂಬವ ಸಂಘದ ಅಧ್ಯಕ್ಷ ಶಿವಣ್ಣ, ಗೋವಿಂದರಾಜ್ ಇತರರು