ಮದ್ದೂರು ತಾಲೂಕು ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಪಟ್ಟಣದ ಪುರಸಭಾ ಆವರಣದಲ್ಲಿ ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜು ಅರಸು ಅವರ 109ನೇ ಜನ್ಮದಿನಾಚರಣೆ ಆಯೋಜಿಸಲಾಗಿತ್ತು. ಸೋಮಶೇಖರ್, ಆತಗೂರು ನಿಂಗಪ್ಪ, ಪಿ.ಶಶಿಕುಮಾರ್, ಮರಿ ಹೆಗ್ಗಡೆ, ಕೆ.ಟಿ.ಶಿವಕುಮಾರ್ ಇದ್ದರು. 
ನ್ಯೂಸ್

ಡಿ.ದೇವರಾಜ ಅರಸು ಜನ್ಮದಿನಾಚರಣೆ

ಮದ್ದೂರು; ತಾಲೂಕು ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಭಾನುವಾರ ಪಟ್ಟಣದ ಪುರಸಭಾ ಆವರಣದಲ್ಲಿ ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರೇಡ- 2 ತಹಸೀಲ್ದಾರ್ ಸೋಮಶೇಖರ್, ದೇವರಾಜ ಅರಸು ಅವರು ತುಳಿತಕ್ಕೆ ಒಳಗಾದ ಜನರಿಗಾಗಿ ಹೋರಾಡಿದರು. ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿ ಬಡವರ ಪಾಲಿಗೆ ದಾರಿ ದೀಪವಾದರು ಎಂದು ಬಣ್ಣಿಸಿದರು.

ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅತಗೂರು ನಿಂಗಪ್ಪ ಮಾತನಾಡಿ, ರಾಜ್ಯದ ಎಲ್ಲ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ದೇವರಾಜ ಅರಸು. ಅವರ ಆರ್ದಶವನ್ನು ಅಳವಡಿಸಿಕೊಳ್ಳುವ ಮೂಲಕ ಅಹಿಂದ ಸಮಾಜದವರು ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.

ಅಹಿಂದ ಸಂರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಮರಿ ಹೆಗ್ಗಡೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಪದಾಧಿಕಾರಿಗಳಾದ ಕೆ.ಟಿ.ಶಿವಕುಮಾರ್, ಮಲ್ಲರಾಜು, ದಾಕ್ಷಾಯಿಣಿ, ಮಹದೇವಯ್ಯ, ವೈರಮುಡಿ, ಗೋವಿಂದಯ್ಯ, ಮಮತಾ, ನಾಗಲಿಂಗ, ಚಿಕ್ಕನಂಜಾಚಾರಿ, ವಿಶ್ವಕರ್ಮ ಸಂಘದ ಜಿಲ್ಲಾ ಉಸ್ತುವಾರಿ ಆನಂದಚಾರಿ, ಮುಖಂಡರಾದ ರಾಚಯ್ಯ, ಧನಂಜಯ, ಕರಡಕೆರೆ ಯೋಗೇಶ್, ಅಣ್ಣೂರು ರಾಜಣ್ಣ, ಕೆ.ಜೆ.ಗೋವಿಂದ, ರಾಜು, ಮಡೇನಹಳ್ಳಿ ತಿಮ್ಮಯ್ಯ , ಶಿವಲಿಂಗಯ್ಯ, ಗಂಟಯ್ಯ, ಬಾಬು, ಬಸವಚಾರಿ ಇದ್ದರು.