ನ್ಯೂಸ್

ಡಿ.5ರಂದು ಸ್ವಾಭಿಮಾನಿ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಖಂಡಿಸಿ ಹಾಗೂ ಅಹಿಂದ ಸಮುದಾಯಗಳೆಲ್ಲ ಇವರ ಜತೆಗಿವೆ ಎಂಬುದನ್ನು ಪ್ರದರ್ಶಿಸಲು ಡಿಸೆಂಬರ್ 5ರಂದು ಹಾಸನದಲ್ಲಿ ಅಹಿಂದ ಸಂಘಟನೆಗಳ ನೇತೃತ್ವದಲ್ಲಿ ಸ್ವಾಭಿಮಾನಿ ಸಭೆ ಆಯೋಜಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ದಮನ ಮಾಡುವ ಕೆಲಸ ಬಿಜೆಪಿ ಹಾಗೂ ಜೆಡಿಎಸ್ ನಡೆಸಿವೆ. ಇದಕ್ಕಾಗಿ ವಾಲ್ಮೀಕಿ ಹಗರಣ, ಮುಡಾ ಹಗರಣವನ್ನು ನೆಪ ಮಾಡಿಕೊಂಡಿವೆ. ಅಲ್ಲದೆ ಪಾದಯಾತ್ರೆನಡೆಸಿದರೂ, ಈಚಿನ ಮೂರು ಕ್ಷೇತ್ರದ ಉಪ ಚುನಾವಣೆಗಳಲ್ಲಿ ಮತದಾರರು ಈ ಎರಡೂ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖಂಡರಾದ ಜೆ.ಜೆ.ಆನಂದ್, ಮೊಗಣ್ಣಾಚಾರ್, ಲೋಕೇಶ್‌ಕುಮಾರ್ ಮಾದಾಪುರ, ಮೈಸೂರು ಬಸವಣ್ಣ ಇದ್ದರು.