ಕೋಟೆಗಂಗೂರಿನ ಮಾನಸ ಇಂಟರ್‌ನ್ಯಾಷನಲ್ ಐಸಿಎಸ್‌ಇ ಶಾಲೆ ಪ್ರಾಚಾರ್ಯೆ ಕೆ.ವಿ.ಸೌಮ್ಯಾ 
ನ್ಯೂಸ್

ಡಿ.1ಕ್ಕೆ ಮಾನಸ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ

ಶಿವಮೊಗ್ಗ: ಮಕ್ಕಳ ದಿನಾಚರಣೆ ಅಂಗವಾಗಿ ಕೋಟೆಗಂಗೂರಿನ ಮಾನಸ ಇಂಟರ್‌ನ್ಯಾಷನಲ್ ಐಸಿಎಸ್‌ಇ ಶಾಲೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಡಿ.1ರ ಬೆಳಗ್ಗೆ 10ಕ್ಕೆ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯೆ ಕೆ.ವಿ.ಸೌಮ್ಯಾ ಹೇಳಿದರು.

ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಪ್ರತಿವರ್ಷ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏಳು ವಿಭಾಗದಲ್ಲಿ ಸ್ಪರ್ಧೆ ನಡೆಸುತ್ತಿದ್ದು ಎಲ್‌ಕೆಜಿ, ಯುಕೆಜಿ, 1 ಮತ್ತು 2ನೇ ತರಗತಿ ಮಕ್ಕಳಿಗೆ ನೀಡಲಾಗಿರುವ ಚಿತ್ರಕ್ಕೆ ಬಣ್ಣ ತುಂಬುವುದು. 3ರಿಂದ 4ನೇ ತರಗತಿಯವರೆಗೆ ಪರಿಸರ ಮಾಲಿನ್ಯ, 5 ಮತ್ತು 6ನೇ ತರಗತಿವರೆಗೆ ಸ್ವಚ್ಛ ಭಾರತ್, 7 ಮತ್ತು 8ನೇ ತರಗತಿಗೆ ವನ್ಯಜೀವಿಗಳ ರಕ್ಷಣೆ, 9 ಮತ್ತು 10ನೇ ತರಗತಿ ಮಕ್ಕಳಿಗೆ ಪ್ರಕೃತಿ ವಿಕೋಪಗಳು ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಉಳಿದ ಪರಿಕರಗಳನ್ನು ಸ್ಪರ್ಧಿಗಳು ತರಬೇಕು. ಮಧ್ಯಾಹ್ನ 1ಕ್ಕೆ ಏಳು ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಲಾಗುವುದು ಎಂದರು.

ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿನೋಬನಗರ, ಆಲ್ಕೊಳ ಹಾಗೂ ಶಿವಮೊಗ್ಗ ಬಸ್ ನಿಲ್ದಾಣದಿಂದ ಶಾಲಾ ವಾಹನ ಸೌಲಭ್ಯವಿದೆ. ಹೆಸರು ನೋಂದಣಿ ಹಾಗೂ ಮಾಹಿತಿಗೆ ಮೊ. 9353143033, 9448976887 ಸಂಪರ್ಕಿಸಬಹುದು. ಶಾಲೆ ಆಡಳಿತಾಧಿಕಾರಿ ತಾರಾ, ಶಿಕ್ಷಕರಾದ ಕೆ.ವಿ.ಅರುಣಾ, ಸಂದೀಪ್, ಅಂಥೋನಿ ಜಿಪ್ಸನ್‌ದೀಪ್ ಸುದ್ದಿಗೋಷ್ಠಿಯಲ್ಲಿದ್ದರು.