ನ್ಯೂಸ್

ಡಾನ್‌ಗಳ ಹೆಸರು ಹೇಳಿ ಬೆದರಿಕೆ ಹಾಕಿದ್ದ ಆರೋಪಿಯ ಸೆರೆ

ಬೆಂಗಳೂರು: ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದಲ್ಲದೇ ಆಕೆಯ ಕುಟುಂಬ ಸದಸ್ಯರಿಗೆ ಅಂಡರ್‌ವರ್ಲ್ಡ್ ಡಾನ್‌ಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಹೆಸರೇಳಿ ಧಮ್ಕಿ ಹಾಕಿದ್ದವನನ್ನು ಭಾರತೀ ನಗರ ಪೊಲೀಸರು ಬಂಧಿಸಿದ್ದಾರೆ.

ಶಾಂತಿನಗರ ನಿವಾಸಿ ಅಫಾನ್ ಅಹಮ್ಮದ್(೨೮) ಬಂಧಿತ.
ಆರೋಪಿಗೆ ಪರಿಚಯವಿರುವ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರು ನೀಡಿದ ಯುವತಿ:
ತಮ್ಮ ಸಂಬಂಧಿಯಾದ ಅಾನ್ ಅಹಮದ್ ಸಂಬಂಧಿಕರ ಮದುವೆ ಸಮಾರಂಭದಲ್ಲಿ ತಮಗೆ ಪರಿಚಯವಾಗಿದ್ದು, ನಂತರ ನಾವಿಬ್ಬರೂ ಆತ್ಮೀಯರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಭೇಟಿಯಾಗಿರುತ್ತೇವೆ. ಹೀಗಿರುವಾಗ ಅಾನ್ ಅಹಮದ್ ನನ್ನ ಮೊಬೈಲ್‌ನ ವಾಟ್ಸ್‌ಆ್ಯಪ್‌ಗೆ ಅಸಭ್ಯ ರೀತಿಯ ಸಂದೇಶಗಳನ್ನು ಕಳುಹಿಸಿದ್ದ. ಅಶ್ಲೀಲವಾದ ೆಟೋ ಮತ್ತು ವಿಡಿಯೋಗಳನ್ನು ತನ್ನ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ. ನೀನು ನನ್ನನ್ನು ಭೇಟಿಯಾಗಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಡ್ರಗ್ಸ್ ಮಾತ್ರೆಗಳ ೆಟೋಗಳನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ. ಹಣ ನೀಡದಿದ್ದರೆ ಅಶ್ಲೀಲವಾದ ೆಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ತನ್ನಿಂದ ೧.೨೮ ಲಕ್ಷ ರೂ. ಪಡೆದಿದ್ದ.

ಬೆದರಿಕೆ ಹಾಕಿದ್ದ ಆರೋಪಿ:
ಈ ಬಗ್ಗೆ ತನ್ನ ಸಹೋದರರು ಅಾನ್ ಅಹಮದ್‌ಗೆ ತಿಳುವಳಿಕೆ ಹೇಳಲು ಹೋದಾಗ ನನ್ನ ತಂದೆಯವರಿಗೆ ಅಂತರಾಷ್ಟ್ರೀಯ ಡಾನ್‌ಗಳಾದ ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲಾ ನನಗೆ ತುಂಬಾ ಹತ್ತಿರದವರು, ಇವರಿಂದ ನಿಮ್ಮ ಕುಟುಂಬಕ್ಕೆ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಜತೆಗೆ ತನ್ನ ಸಹೋದರರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಹಮದ್‌ಗೆ ಬೇರೆ ಹುಡಿಗಿಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈತನಿಂದ ಲೈಂಗಿಕ ಕಿರುಕುಳ, ಲೈಂಗಿಕ ಹಿಂಸೆ ಸಹಿಸಲಾಗುತ್ತಿಲ್ಲ. ಈತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಭಾರತಿನಗರದ ನಿವಾಸಿಯಾದ ೨೬ ವರ್ಷದ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.