ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಅಧ್ಯಕ್ಷರಾಗಿದ್ದ, ಮಾಜಿ ಶಾಸಕ ವಾಸು ಅವರ ಸ್ಥಾನಕ್ಕೆ ಚುನಾಯಿತ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಉಪಾಧ್ಯಕ್ಷ ಡಾ.ಸಿ. ಕೃಷ್ಣ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಡಾ.ಸಿ. ಕೃಷ್ಣ, ಡಾ. ಚೈನ್‌ಸಿಂಗ್ ರಾಜ್‌ಪೋರೋಹಿತ್, ಕಾರ್ಯದರ್ಶಿಯಾಗಿ ಎಂ. ಯೋಗೇಂದ್ರ, ಮುಖ್ಯ ಸಂಯೋಜನಾಧಿಕಾರಿಯಾಗಿ ಸಿ.ಕೆ. ಮುರಳೀಧರನ್, ಸಂಘಟನಾ ಕಾರ್ಯದರ್ಶಿ ಹಾಗೂ ತರಬೇತುದಾರರಾಗಿ ಜಿ.ಆರ್.ಪ್ರಭಾಕರ್, ಖಜಾಂಚಿಯಾಗಿ ಕೆ. ಗುರುರಾಜ್, ಜಂಟಿ ಕಾರ್ಯದರ್ಶಿಯಾಗಿ ಮಹದೇವಯ್ಯ, ಕೆ.ಗೋಪಿನಾಥ್ ಮತ್ತು ಎಚ್.ಆರ್. ರಾಮಸ್ವಾಮಿ, ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಕೆ. ರಾಜೇಅರಸ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಿ.ಶ್ರೀಕಾಂತ್, ಆರ್ಥಿಕ ಸಲಹೆಗಾರ ಮತ್ತು ಲೆಕ್ಕ ಪರಿಶೋಧಕರಾಗಿ ಕೆ.ಬಿ. ಗಂಗಾಧರ್ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಉಳ್ಳವರು ತರಬೇತಿ ಹೊಂದಲು ಜಿ.ಆರ್. ಪ್ರಭಾಕರ್ ಅವರ ಮೊ. 9751971978, 9448858676 ಅಥವಾ ಎಂ. ಯೋಗೇಂದ್ರ ಮೊ. 9448046667 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.