ವಿದ್ಯಾರಣ್ಯಪುರಂನಲ್ಲಿನ ದಲಿತ ಅಭಿವೃದ್ಧಿ ಸಂಘದ ವತಿಯಿಂದ ಏ.14 ರಂದು ಬಡಾವಣೆಯ ಸಾರ್ವಜನಿಕ ಹಾಸ್ಟೆಲ್ ಹಿಂಭಾಗದ ಸಮುದಾಯ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಕಾನೂನು ಸಲಹೆಗಾರ ಆರ್.ಲಕ್ಷ್ಮಣ್ ಹೇಳಿದರು.
ಅಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ನಾರಾಯಣ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ. ಈ ವೇಳೆ, ಬಿಪಿ, ಶುಗರ್, ಇಸಿಜಿ, ಎಕೋ, ಹಲ್ಲಿನ ತಪಾಸಣೆ, ಕಣ್ಣಿನ ತಪಾಸಣೆ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಳಿಕ ಅಂಬೇಡ್ಕರ್, ಬುದ್ಧ, ಬಸವ ಕುರಿತ ಜಾಗೃತಿ ಗೀತೆಗಳ ಗಾಯನವಿದೆ. ಹೀಗಾಗಿ ಸಾರ್ವಜನಿಕರು ಪ್ರಯೋಜನ ಪಡೆಯಬೇಕೆಂದರು ಎಂದು ಕೋರಿದರು. ಆಯೋಜಕರಾದ ಡಾ.ಅಶೋಕ್, ನೇತ್ರಾವತಿ, ಲತಾ, ಶಿಲ್ಪಾ, ರೇಣುಕಾ, ಗುರುವಯ್ಯ ಇತರರಿದ್ದರು.