ವಿಜಯವಾಣಿ ಸುದ್ದಿಜಾಲ ಕೋಲಾರ
ಬೆಂಗಳೂರಿನ ಜೈನ್ ಡೀಮ್ಡ್ ಯೂನಿವರ್ಸಿಟಿ ವತಿಯಿಂದ "ಸಮಕಾಲೀನ ಸಾಹಿತ್ಯ" ಕುರಿತು ಆಯೋಜಿಸಲಾಗಿದ್ದ ರಾಷ್ಟ್ರೀಯ ಬಹುಭಾಷಾ ವಿಚಾರ ಸಂಕಿರಣದಲ್ಲಿ ಯುವ ವಿದ್ವಾಂಸರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಮಂಡಿಸಿದ "ಆಧುನಿಕ ರಂಗಯಾನದಲ್ಲಿ ಆದಿಕವಿ ಪಂಪ ಮಹಾದರ್ಶನ ಎಂಬ ಸಂಶೋಧನ ಪ್ರಬಂಧಕ್ಕೆ "ಅತ್ಯುತ್ತಮ ಸಂಶೋಧನ ಪ್ರಬಂಧ ಪ್ರಶಸ್ತಿ" ಲಭಿಸಿದೆ.
ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೋ. ಕೃಷ್ಣಮೂರ್ತಿ ಆನೂರು ರವರ ನೆರವು ಮತ್ತು ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನೆಗೆ ಪ್ರಶಸ್ತಿ ಲಭಿಸಿದೆ.
ಎಂ.ಭೈರಪ್ಪನವರ ಕೃತಿಗಳು :
ಬೇಲಿಗಿಡಗಳು ಮಾತಾಡುತಾವೆ, ಅರಳಿನೆರಳಿನ ಗುಡಿಸಲ ಧ್ಯಾನ, ಕರ್ಣರಸಾಯನ, ಜನಮುಖಿ(ಡಾ.ಎಲ್.ಬಸವರಾಜು ಅವರ ಕೃತಿಕೈಪಿಡಿ), ಅಂತರಗAಗವ್ವ, ಬಸವ ಸಿನಿಮಾ ಬುದ್ಧ ಪ್ರತಿಮಾ, ನಿಚ್ಚಂ ಪೊಸತು, ಬುದ್ಧನಗೆಯ ತಾಯಿನದಿ, ಸಂಶೋಧನಯಾನ, ಶರಣಯಾನ, ಬೆಳಗು ಬೆಳಕೆ ಕತ್ತಲೊಡಲಿಂದ (ಮೈಸೂರು-ಚಾಮರಾಜನಗರದ ಪ್ರಾತಿನಿಧಿಕ ತತ್ವಪದಗಳು), ಗ್ರಾಮೀಣ ಸಂಸ್ಕೃತಿ ಚರಿತ್ರೆ-ಸಂಪುಟ.೧, ಮುತ್ತುಮುಳುಗ (ಡಾ.ಎಲ್.ಬಸವರಾಜು ಜನ್ಮಶತಮಾನೋತ್ಸವ ನೆನಪಿನ ಸಂಪುಟ), ಕಾಲುದಾರಿಯ ಸಿರಿಬೆಳಗು (ಡಾ.ಕೃಷ್ಣಮೂರ್ತಿ ಹನೂರು ಅವರ ಸಾಹಿತ್ಯ ಕುರಿತ ಬರಹಗಳು), ನೀಲಬಯಲಿನ ಕಾರುಣ್ಯಗಂಗೋತ್ರಿ ಮೊದಲಾದ ಕೃತಿಗಳನ್ನು ರಚಿಸಿರುತ್ತಾರೆ.
ಶಾಸ್ತ್ರೀಯ ಕನ್ನಡ ಸಾಹಿತ್ಯಕ್ಕೆ ಯುವ ವಿದ್ವಾಂಸರು ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರವು ನೀಡುವ "೨೦೧೯ರ ರಾಷ್ಟ್ರಪತಿ ಪ್ರಶಸ್ತಿ - ಬಾದರಾಯಣ ವ್ಯಾಸ ಸಮ್ಮಾನ್" (೨೦೧೯ರಲ್ಲಿ) ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.
ಚಿತ್ರ ೧೩ ಕೆ.ಎಲ್.ಆರ್. ೦೯ : ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ಕುಪ್ಪನಳ್ಳಿ ಬೈರಪ್ಪನವರು ಅತ್ಯುತ್ತಮ ಸಂಶೋಧನ ಪ್ರಬಂಧ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು.
ಚಿತ್ರ ೧೩ ಕೆ.ಎಲ್.ಆರ್. ೦೯ : ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ರವರ ಭಾವಚಿತ್ರ