ನ್ಯೂಸ್

ಡಾ.ಅರಿವುಶಿವಪ್ಪ ರವರಿಗೆ ಭೂದಿವರ್ಧನ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಬೆಂಗಳೂರಿನ ಸ್ಪೂರ್ತಿಧಾಮ ವತಿಯಿಂದ ಏ.೧೪ ರಂದು ಅಂಬೇಡ್ಕರ್ ಹಬ್ಬ ೨೦೨೫ರ ವೈವಿಧ್ಯತೆಯ ಸಂಭ್ರಮಾಚಾರಣೆಯ ಪ್ರಯುಕ್ತ ಸಾಧಕರಿಗೆ ಭೋದಿವೃಕ್ಷ ಮತ್ತು ಭೋದಿವರ್ದನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಡಾ.ಅರಿವು ಶಿವಪ್ಪ, ಕೋಲಾರ. ಇವರಿಗೆ ಭೋದಿವರ್ಧನ ಪ್ರಶಸ್ತಿ ಲಭಿಸಿದೆ.

ಡಾ.ಅವಿರುಶಿವಪ್ಪ ರವರು ಕೋಲಾರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಇದರ ಜೊತೆಗೆ ಅಸ್ಪೃಶ್ಯತೆಯ ನಿವಾರಣೆಗಾಗಿ ಗೃಹಪ್ರವೇಶ, ದೇವಾಲಯದ ಪ್ರವೇಶ, ಸಹಭೋಜನ, ಸಮಾನತೆಯ ಟೀ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ, ಹೊನ್ನಿನ ನೀರು-ಒಂದು ಬಾವಿ ಇತ್ಯಾದಿ ಕಾರ್ಯಕ್ರಮಗಳನ್ನು ೨೦೧೬ ರಿಂದ ನಡೆಸಿಕೊಂಡು ಬಂದಿದ್ದಾರೆ.

ವಿಧವೆ ಮತ್ತು ವಿಚ್ಛೇದಿತರಿಗೆ ಮರು ಮದುವೆಗಳನ್ನು ಸಹ ಏರ್ಪಡಿಸುತ್ತಿದ್ದಾರೆ. ಗ್ರಾಮೀಣ ಭಾರತದ ಇತಿಹಾಸ, ಕಲೆ, ಕೃಷಿ, ಕೈಗಾರಿಕೆ, ಕೌಶಲ್ಯಗಳನ್ನು ದಾಖಲಿಸಲು ಅರಿವು ಭಾರತ, ಯೂಟ್ಯೂಬ್ ಚಾನೆಲ್ ಮೂಲಕ ೩೦೦ ಕ್ಕೂ ಹೆಚ್ಚು ಡಾಕ್ಯುಮೆಂಟರಿಗಳನ್ನು ಪ್ರಕಟಿಸಿದ್ದಾರಲ್ಲದೆ ಭಾರತದ ಚರಿತ್ರೆ ಮತ್ತು ಸಂಸ್ಕೃತಿ ಬಗ್ಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರ ಸಾಮಾಜಿಕ ಕಾಳಜಿಯನ್ನು ಗುರ್ತಿಸಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದ್ದಾರೆ.

ಚಿತ್ರ ೧೦ ಕೆ.ಎಲ್.ಆರ್. ೦೪ : ಡಾ.ಅರಿವುಶಿವಪ್ಪ ರವರ ಭಾವಚಿತ್ರ