ಟೋಲ್ ಪ್ಲಾಜಾಗಳಲ್ಲಿನ ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ೆ. 15ರ ಮಧ್ಯರಾತ್ರಿಯಿಂದ ಾಸ್ಟಾೃಗ್ ಮೂಲಕ ಟೋಲ್ ಶುಲ್ಕ ಪಾವತಿ ಕಡ್ಡಾಯಗೊಳಿಸಿದೆ. ಅದರಿಂದಾಗಿ ಟೋಲ್ ಶುಲ್ಕ ವಸೂಲಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಪ್ರತಿದಿನ ಸರಾಸರಿ 100 ಕೋಟಿ ರೂ. ಶುಲ್ಕ ವಸೂಲಿಯಾಗುತ್ತಿದೆ. ಾಸ್ಟಾೃಗ್ ಕಡ್ಡಾಯಕ್ಕೂ ಮುನ್ನ ಈ ಪ್ರಮಾಣ 85ರಿಂದ 90 ಕೋಟಿ ರೂ.ನಷ್ಟಿತ್ತು. ಅಲ್ಲದೆ, ೆ. 25ರಂದು ಒಂದೇ ದಿನ 103.94 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. ಅದರ ಜತೆಗೆ ಾಸ್ಟಾೃಗ್ ಬಳಕೆದಾರರ ಸಂಖ್ಯೆಯೂ ಹೆಚ್ಚಳವಾಗಿದೆ. ಕಳೆದ 19 ದಿನಗಳಲ್ಲಿ 20 ಲಕ್ಷ ಜನರು ಹೊಸದಾಗಿ ಾಸ್ಟಾೃಗ್ ಖರೀದಿ ಮಾಡಿದ್ದಾರೆ. ಆಮೂಲಕ ಾಸ್ಟಾೃಗ್ ಬಳಕೆದಾರರ ಸಂಖ್ಯೆ 2.8 ಕೋಟಿಗೆ ಹೆಚ್ಚಳವಾದಂತಾಗಿದೆ.
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಟೋಲ್‌ಪ್ಲಾಜಾಗಳಲ್ಲಿ ಸ್ಟಾೃಗ್ ಮೂಲಕ ಟೋಲ್ ಶುಲ್ಕ ಪಾವತಿ ಕಡ್ಡಾಯಗೊಳಿಸಿದ ನಂತರ ಟೋಲ್ ಶುಲ್ಕ ವಸೂಲಿಯಲ್ಲಿ ಏರಿಕೆಯಾಗಿದ್ದು, ಕಳೆದ 10 ದಿನಗಳಿಂದೀಚೆಗೆ ಪ್ರತಿದಿನ ಸರಾಸರಿ 100 ಕೊಟಿ ರೂ. ಶುಲ್ಕ ವಸೂಲಿಯಾಗುತ್ತಿದೆ.