ಕೆ.ಆರ್.ನಗರ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ (ಟಿಎಪಿಸಿ ಎಂಎಸ್) ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಟಿ.ಎಲ್. ಪರಶಿವಮೂರ್ತಿ ಚುನಾಯಿತರಾದರು.
ಅಧ್ಯಕ್ಷರಾಗಿದ್ದ ಬಿಜೆಪಿಯ ಪ್ರಭಾಕರ್ ಜೈನ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಪ್ರಮೀಳಾ ಮತ್ತು ಜೆಡಿಎಸ್ ಬೆಂಬಲಿತರಾಗಿ ಟಿ.ಎಲ್.ಪರಶಿವಮೂರ್ತಿ ನಾಮಪತ್ರ ಸಲ್ಲಿಸಿದ್ದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಯಲ್ಲಿ ಟಿ.ಎಲ್.ಪರಶಿವ ಮೂರ್ತಿ 8 ಮತ ಪಡೆದು ಆಯ್ಕೆಯಾದರೆ, ಪ್ರಮೀಳಾ 5 ಮತ ಪಡೆದು ಪರಾ ಭವಗೊಂಡರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ರವಿ ಕರ್ತವ್ಯ ನಿರ್ವಹಿಸಿದರು. ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ವಿ.ದೇವರಹಟ್ಟಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಎಚ್.ಆರ್.ಮಹೇಶ್, ನಿರ್ದೇಶಕರಾದ ಎಸ್.ಸಿದ್ದೇಗೌಡ, ಹೆಬ್ಬಾಳು ಬಾಲು, ಎಚ್.ಎಸ್.ಅಶೋಕ್, ಎಚ್.ಆರ್.ಗಿರೀಶ್, ತೋಟಪ್ಪ ನಾಯಕ, ಡಿ.ವಿ. ಕೃಷ್ಣಮೂರ್ತಿ, ಜಿ.ಆರ್.ಸ್ವರೂಪ, ಸಹಕಾರ ಇಲಾ ಖೆಯ ಪ್ರಕಾಶ್‌ರಾವ್, ಟಿಎಪಿಸಿ ಎಂಎಸ್ ಕಾರ್ಯ ದರ್ಶಿ ಪುಟ್ಟ ಸ್ವಾಮಿ ಇದ್ದರು.
ನೂತನ ಅಧ್ಯಕ್ಷ ಪರಶಿವ ಮೂರ್ತಿ ಅವರನ್ನು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು. ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಜೆಡಿಎಸ್ ಪಕ್ಷದ ವರಿಷ್ಠರಿಗೆ ಜಯಕಾರ ಕೂಗಿ ವಿಜಯೋತ್ಸವ ಆಚರಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಎಚ್.ಸಿ.ಕುಮಾರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಹಂಪಾಪುರ ರಮೇಶ್, ಟೌನ್‌ಹರೀಶ್, ತಿಪ್ಪೂರು ವಿಷ್ಣು, ಮಂಜುನಾಥ್, ಹರ್ಷಿತ್, ಕನುಗನಹಳ್ಳಿ ವಿಶ್ವ, ರಾಧಾಕೃಷ್ಣ, ಧನಂಜಯ, ರಾಜೇಗೌಡ, ಮಂಜುನಾಥ್, ಕೋಳಿಕಿಟ್ಟಿ, ಅಜಯ್, ಸುಜಯ್‌ಕುಮಾರ್, ಎಚ್‌ಡಿಕೆ ಭಾಸ್ಕರ್, ಹರೀಶ್, ರುದ್ರೇಶ್, ಮಹೇಶ್, ಸತ್ಯನಾರಾಯಣ್ ಇತರರು ಹಾಜರಿದ್ದರು.