ತಿ.ನರಸೀಪುರ: ತಾಲೂಕಿನ ಟಿ. ದೊಡ್ದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪುಟ್ಟಸ್ವಾಮಿ, ಉಪಾಧ್ಯಕ್ಷೆಯಾಗಿ ಮಂಜುಳಾ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ.ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ, ಸಹಾಯಕ ಚುನಾವಣಾಧಿಕಾರಿಯಾಗಿ ವಿಶ್ವನಾಥ ರೆಡ್ಡಿ ಕಾರ್ಯನಿರ್ವಹಿಸಿದರು. ಮಾಜಿ ಅಧ್ಯಕ್ಷೆ ಚಿಕ್ಕತಾಯಮ್ಮ, ಸದಸ್ಯರಾದ ಜಯಬಸವಣ್ಣ, ನಿಜಗುಣ, ರಾಜಮ್ಮ, ಆರ್.ಮಹೇಶ್, ಎಂ.ರಾಜೇಶ್, ಪ್ರತಾಪ್, ಮಹದೇವಮ್ಮ, ಮುಖಂಡರಾದ ತಲಕಾಡು ಸುಂದರ ನಾಯಕ, ಕಲಿಯೂರು ಶಿವಣ್ಣ, ಮಾಜಿ ಸದಸ್ಯ ಸಿದ್ದೇಗೌಡ, ಬನ್ನೂರು ಸೋಮಣ್ಣ, ಮಾಲಂಗಿ ಶಿವಸ್ವಾಮಿ, ಹೊಸಪುರ ಮಲ್ಲು, ಹೆಮ್ಮಿಗೆ ಶೇಷಾದ್ರಿ, ನರಸಿಂಹ ಮಾದ ನಾಯಕ, ಕಾಳೀಹುಂಡಿ ಮಹೇಂದ್ರ, ಎಂ.ಮಾದೇಗೌಡ, ಚರಣ್, ಡಿಜೆ ರಮೇಶ್, ಕರಿಬಸವೇಗೌಡ, ಎಂ.ಸಿ.ರಾಜಣ್ಣ, ಮಹೇಶ್, ಸಿದ್ದಪ್ಪ, ಚಿಕ್ಕರಂಗ, ಪಿಡಿಒ ರಾಜಶೇಖರಮೂರ್ತಿ ಮತ್ತಿತರರಿದ್ದರು.