ವಿಜಯವಾಣಿ ಸುದ್ದಿಜಾಲ ಕೋಲಾರ
ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಕೊಳ್ಳುವ ವ್ಯಾಪಾರಿ ಬೆಲೆ ನಿಗಧಿ ಮಾಡುವಂತಾಗಿರುವುದು ದುರಂತ, ಇದು ಸರಿಹೋಗಲು ರೈತರು ಆರ್ಥಿಕವಾಗಿ ಸದೃಢರಾಗಬೇಕು ಅದಕ್ಕಾಗಿ ಉಪ ಕಸುಬುಗಳನ್ನು ಅವಲಂಬಿಸಬೇಕು ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಬಂಗಾರಪೇಟೆ ರಸ್ತೆಯಲ್ಲಿನ ಜ್ಯೋತಿ ಎಜುಕೇಷನ್ ಟ್ರಸ್ಟ್ ಆವರಣದಲ್ಲಿನ ಜನೋಪಕಾರಿ ದೊಡ್ಡಣ್ಣ ರಂಗಮAದಿರದಲ್ಲಿ ಜ್ಯೋತಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ, ಸರ್ವಸದಸ್ಯರ ಸಭೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ರೈತರು ಆರ್ಥಿಕವಾಗಿ ಸದೃಢವಾಗದ ಹೊರತು ಶೋಷಣೆ ತಪ್ಪದು ಎಂದರು.
ಕೃಷಿಯ ಜತೆಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಹೈನುಗಾರಿಕೆ ಪಿತಾಮಹ ಕುರಿಯನ್, ಬಣಕರ್, ಎಂ.ವಿ.ಕೆ. ಅವರು ಪರಿಚಯಿಸಿ ಅಭಿವೃದ್ದಿ ಪಡೆಸದಿದ್ದರೆ ಇಂದು ನಮ್ಮ ರೈತರ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿತ್ತು ಎಂದರು.
ಸಾಲ ಪಡೆವುದು ಹಕ್ಕು ಮರುಪಾವತಿ ಜವಾಬ್ದಾರಿ :
ಯಾವೂದೇ ಸಹಕಾರಿ ಸಂಸ್ಥೆಗಳನ್ನು ಪ್ರಾರಂಭಿಸುವುದು ಸುಲಭ ಆದರೆ ಮುನ್ನೆಡೆಸುವುದು ಸುಲಭವಲ್ಲ ಎಚ್ಚರಿಕೆ ಅತ್ಯಗತ್ಯ. ಸ್ವಲ್ಪ ಲೋಪ ದೋಷಗಳಾದರೂ ನಷ್ಟಕ್ಕೆ ತುತ್ತಾಗುವ ಸಾಧ್ಯತೆಗಳಿದೆ, ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಇರಬೇಕು ಎಂದರು.
ಸಾಲ ಪಡೆಯುವ ಹಕ್ಕು ಇರುವಂತೆ ಮರು ಪಾವತಿಸುವಂತ ಜವಾಬ್ದಾರಿಯು ಇರಬೇಕು. ಸಹಕಾರ ಸಂಸ್ಥೆಯು ಸಧೃಡವಾಗಿ ಬೆಳೆಯಬೇಕಾದರೆ ಪ್ರಾಮಾಣಿಕ ಪ್ರಯತ್ನಗಳು ಅತ್ಯಗತ್ಯವಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಸಾಲಗಳನ್ನು ಜಾತ್ಯಾತೀತವಾಗಿ ನೀಡುವಂತಾಗಬೇಕು. ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಾಲ ಪಡೆದವರು ಸದುದ್ದೇಶಗಳಿಗೆ ಮಾತ್ರ ಬಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ಕ್ರಿಯಾತ್ಮಕ ನಾಯಕರನ್ನು ಹೊಂದಿರುವ ಜಿಲ್ಲೆಯಾಗಿದೆ. ಶಿಸ್ತು ಬದ್ದತೆಗೆ ಮತ್ತೊಂದು ಹೆಸರಾಗಿದ್ದಾರೆ. ಜ್ಯೋತಿ ಕ್ರೆಡಿಟ್ ಕೋ-ಅಪರೇಟಿವ್ ಸೂಸೈಟಿ ಹೆಸರಿಗೆ ತಕ್ಕಂತೆ ಕತ್ತಲಿನಿಂದ ಬೆಳಕಿಗೆ ಕೊಂಡೊಯ್ಯುವAತಹ ಜ್ಯೋತಿಯಾಗಿರಬೇಕೆಂದು ಶುಭ ಹಾರೈಸಿದರು.
ಸೊಸೈಟಿ ಹಣಕ್ಕೆ ಕಾವಲುಗಾರನಾಗಿರುವೆ :
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಸೊಸೈಟಿಯಲ್ಲಿ ನಾನು ಯಾವುದೇ ಆಡಳಿತ ಹುದ್ದೆಯಲ್ಲಿ ಇರದಿದ್ದರೂ ಸೊಸೈಟಿಗೆ ಕಾವಲುಗಾರನಾಗಿದ್ದು, ಮಾರ್ಗದರ್ಶನ ನೀಡುವೆ ಎಂದು ತಿಳಿಸಿದರು.
ಸೊಸೈಟಿ ಆರಂಭದ ಪ್ರಥಮ ಮೂರು ತಿಂಗಳು ಠೇವಣಿ ಸಂಗ್ರಹ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು. ಸುಮಾರು ಒಂದು ಕೋಟಿ ರೂ ಠೇವಣಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಹೆಚ್ಚಾಗಿ ಸಾರ್ವಜನಿಕರ ಠೇವಣಿ ಸಂಗ್ರಹಿಸುವ ಮೂಲಕ ಸಾಲ ವಿತರಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದರೂ ಸಹಕಾರಿ ಸಂಸ್ಥೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕಂಡಿಲ್ಲ. ಇನ್ನು ಹೆಚ್ಚಿನ ಅಭಿವೃದ್ದಿಯ ಸುಧಾರಣೆಗಳನ್ನು ಕಾಣಬೇಕಾಗಿತ್ತು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಕಾರಿ ಸಂಸ್ಥೆಗಳು ಸ್ಥಾಪಿತವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತನೂರು ಡಾ.ಜಿ. ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದ ಮೇಲೆ ರೈತರು ಪಡೆದ ಸಾಲ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಿದರು. ಈ ಸಂದರ್ಭದಲ್ಲಿ ಮುಳಬಾಗಿಲು ಪಿ.ಎಲ್.ಡಿ. ಬ್ಯಾಂಕಿನ ೩೫ ಲಕ್ಷ ರೂ ಅಸಲು ನಾನೇ ಕಟ್ಟಿ ಆ ಸಂಸ್ಥೆಯನ್ನು ರೈತರಿಗಾಗಿ ಉಳಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಈ ಸಂಸ್ಥೆಯ ಸಂಸ್ಥಾಪಕರಾದ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ತಮ್ಮ ೩೦ನೇ ವರ್ಷದಲ್ಲಿಯೇ ವಿಧಾನ ಪರಿಷತ್ ಸದಸ್ಯರಾದರು ಸರಳ ವ್ಯಕ್ತಿತ್ವ ಹೊಂದಿದ್ದ ಅವರಿಗೆ ಅಭಿಮಾನಿಗಳಿಂದ ಕಾರಿನ ವ್ಯವಸ್ಥೆ ಮಾಡಲು ಹೋದಾಗ ನಿರಾಕರಿಸಿ, ಈ ಜಾಗವನ್ನು ಖರೀದಿಸಿ ಜಾತ್ಯಾತೀತವಾಗಿ ಸಾರ್ವಜನಿಕರ ಶೈಕ್ಷಣಿಕೆ ಅಭಿವೃದ್ದಿಗೆ ಮೀಸಲಿಟ್ಟರು ಎಂದರು.
ಸುಮಾರು ೧೩.೫ ಲಕ್ಷ ರೂ ಶೇರುಗಳನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ. ಈ ಸಂಸ್ಥೆ ಸಣ್ಣದಾದರೂ ಯಾವೂದೇ ಮುಜುಗರವಿಲ್ಲದೆ ಸಚಿವರು ಅಗಮಿಸಿ ಉದ್ಘಾಟಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ.
ಸಹಕಾರ ಸಂಸ್ಥೆಗಳಲ್ಲೂ ಮೀಸಲಾತಿ ಅಗತ್ಯವಿದೆ ಎಂದು ಸಹಕಾರ ಕಾಯ್ದೆಗೆ ತಿದ್ದುಪಡಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಅದರೆ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಈಗಲು ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರು ತಡೆ ನೀಡಿದ್ದಾರೆ ಎಂದರು.
ಸೊಸೈಟಿಯ ಅಧ್ಯಕ್ಷ ಎಂ.ಜಿ.ಮಧುಸೂಧನ್ ನಗರಸಭೆ ಅಧ್ಯಕ್ಷೆ ಲಕ್ಷಿö್ಮÃ ದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಸಹಾಯಕ ಕಮೀಷನರ್ ಡಾ. ಮೈತ್ರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಖಾನ್, ಸಹಾಯಕ ನಿಬಂಧಕ ನವೀನ್ ಕುಮಾರ್, ಸಚಿವರ ವಿಶೇಷಾಧಿಕಾರಿ ರಮಣರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಸೊಸೈಟಿ ಉಪಾಧ್ಯಕ್ಷ ವಿ.ಸತೀಶ್‌ಮೂರ್ತಿ, ಜ್ಯೋತಿ ಎಜುಕೇಷನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್, ವ್ಯವಸ್ಥಾಪಕ ಸುನೀಲ್, ಮೈಸೂರು ಮಿನರಲ್ಸ್ ಮಾಜಿ ನಿರ್ದೇಶಕ ಆರ್.ಕಿಶೋರ್‌ಕುಮಾರ್ ಹಾಗೂ ಸೊಸೈಟಿಯ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ ೨೨ ಕೆ.ಎಲ್.ಆರ್. ೦೫ ; ಕೋಲಾರ ನಗರದ ಬಂಗಾರಪೇಟೆ ರಸ್ತೆಯಲ್ಲಿನ ಜ್ಯೋತಿ ಎಜುಕೇಷನ್ ಟ್ರಸ್ಟ್ ಆವರಣದಲ್ಲಿನ ಜನೋಪಕಾರಿ ದೊಡ್ಡಣ್ಣರಂಗಮAದಿರದಲ್ಲಿ ಜ್ಯೋತಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆಯನ್ನು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ನೆರವೇರಿಸಿದರು.ಮಾಜಿ ಸಭಾಪತಿ ವಿ.ಆರ್.ಸುದರ್ಶನ್,ಶಾಸಕರಾದ ಕೊತ್ತೂರು ಮಂಜುನಾಥ್, ಅನಿಲ್‌ಕುಮಾರ್ ಮತ್ತಿತರರಿದ್ದರು.