ನ್ಯೂಸ್

ಜ್ಞಾನ ಎಂಬುದು ಅತೀ ಮುಖ್ಯ:ಶ್ರೀಧರ್ ಕಲಿವೀರ್

ಹಾಸನ : ಜ್ಞಾನ ಎಂಬುದು ಅತೀ ಮುಖ್ಯ. ಸಂವಿಧಾನದಂತಹ ಪುಸ್ತಕದ ಹಾಳೆ ತೆಗೆದು ನೋಡಿದರೇ ಮಾತ್ರ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಎಸ್.ಸಿ/ಎಸ್.ಟಿ. ಜನಾಂಗದ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಶ್ರೀಧರ್ ಕಲಿವೀರ್ ಅಭಿಪ್ರಾಯ ವ್ಯಾಕ್ತ ಡಿಸಿದರು.

  ನಗರದ ಸರ್ಕಾರಿ ಆಸ್ಪತ್ರೆ ಬಳಿ ಇರುವ ಸ್ವಾಭಿಮಾನ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಮೂಲ ನಿವಾಸಿ ಜನಾಂಗದ ಇತಿಹಾಸ ಮತ್ತು ಅಂಬೇಡ್ಕರ್‌ರವರು  

ರಚಿಸಿದ ಸಂವಿಧಾನದಲ್ಲಿ ಪರಿಶಿಷ್ಟರ ಸಮಸ್ಯೆಗಳಿಗಿರುವ ಪರಿಹಾರಗಳು ಕುರಿತು ವಿಚಾರ ಸಂಕಿರಣವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಮರ್‌ರವರು ಜಗತ್ತಿನ ಆರು ಜನ ವಿದ್ಯಾವಂತರಲ್ಲಿ ಒಬ್ಬರಾಗಿದ್ದು, ಅವರು 22 ಗ್ರಂಥಗಳನ್ನು ಬರೆದಿದ್ದಾರೆ. ವಿಪರ್ಯಾಸ ಎಂದರೇ ದಲಿತ ಸಂಘಟನೆಯ ಕಛೇರಿಗಳಿಗೆ ಹೋದರೆ ಅಂಬೇಡ್ಕರ್ ಬರೆದ ಯಾವ ಗ್ರಂಥಗಳು ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಮೂಲ ನಿವಾಸಿಗಳಿಗೆ ಬಹಳ ಮುಖ್ಯವಾಗಿ ಬೇಕಾಗಿರುವುದು ಅಂಬೇಡ್ಕರ್ ಗ್ರಂಥವಾಗಿದೆ. ನಾವು ಯಾರು? ನಮ್ಮ ಇತಿಹಾಸ ಏನು? ಆರ್ಯ ದೇಶಕ್ಕೂ ನಮಗೂ ಇರುವ ಸಂಬಂಧವೇನು? ಭಾರತದ ಮೂಲ ನಿವಾಸಿಗಳ ಇತಿಹಾಸ ಅರಿತುಕೊಂಡರೇ ಮಾತ್ರ ಮುಂದೆ ಒಂದು ಭವ್ಯ ಇತಿಹಾಸವನ್ನು ಸೃಷ್ಠಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಜಗತ್ತಿನ ಶ್ರೇಷ್ಟ ನಾಗರೀಕತೆಗಳಲ್ಲಿ ಒಂದಾದ ಸಿಂಧು ನಾಗರೀಕತೆ ಕಟ್ಟಿದವರು. ಸುಮಾರು 4 ಸಾವಿರ ವರ್ಷಗಳ ಹಿಂದೆ ವಿದೇಶಿ ಆರ್ಯ ಅಥವಾ ವೈದಿಕ ಜನಾಂಗದವರು ಇಲ್ಲಿ ಆಳುತ್ತಿದ್ದ ನಾಗ ಜನಾಂಗದ ಮೇಲೆ ಆಕ್ರಮಣ ಮಾಡಿ ದೇಶದ ಅಧಿಕಾರ ಕಬಳಿಸಿದರು ಎಂದು ಹಿಂದಿನ ಘಟನೆಯನ್ನು ಮರುಕಳಿಸಿದರು.

 ಶಿಕ್ಷಣ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳವು ಜಾರಿಯಾಗಿದ್ದು, ಇದರಿಂದ ವಾರ್ಷಿಕ 10 ಸಾವಿರ ಕೋಟಿ ಅನುದಾನವು ಬಂದಿದ್ದು, ಆದರೇ ಹೆದ್ದಾರಿ ಮತ್ತು ಇತರೆ ಅನ್ಯ ಉದ್ದೇಶಗಳಿಗೆ ಹಣ ದುರ್ಬಳಕೆ ಆಗುತ್ತಿದ್ದು, ಇದರ ತಡೆ ಕ್ರಮ, ಕೈಗೊಂಡು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರು ಮತ್ತು ನೀಡಿದವರಿಗೆ ಜೈಲು ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು
ಇದೆ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್,  ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ಮುಖಂಡ ಕೃಷ್ಣ, ಕೆ.ಪಿ.ಎಸ್.ಎಸ್. ಜಿಲ್ಲಾಧ್ಯಕ್ಷ ಕೆ. ವೈ. ಜಗದೀಶ್, ವಳಲಹಳ್ಳಿ ಜಿಲ್ಲಾಧ್ಯಕ್ಷ ವಿರೇಶ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರದೀಪ್, ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ನಾಗೇಂದ್ರ, ಮಹಿಳಾ ಹೋರಾಟಗಾರ್ತಿ ಪ್ರಮೀಳ ಹೆತ್ತೂರ್,ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸಾಣೇನಹಳ್ಳಿ  ಇತರರು ಇದ್ದರು.