ಹುಣಸೂರು ತಾಲೂಕಿನ ಹನಗೋಡು ಆಸ್ಪತ್ರೆ ವೈದ್ಯ ಡಾ.ಜೋಗೇಂದ್ರನಾಥ್ ಅವರನ್ನು ಶಾಸಕ ಹರೀಶ್‌ಗೌಡ ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.  
ನ್ಯೂಸ್

ಜೋಗ್ರೇಂದ್ರನಾಥ್ ಸೇವೆ ಅವಿಸ್ಮರಣೀಯ

ಹನಗೋಡು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಡಾ.ಎನ್.ಜೋಗ್ರೇಂದ್ರನಾಥ್ 28 ವರ್ಷ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಪ್ರಶಂಸಿಸಿದರು.

ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಇಲ್ಲಿನ ಪಂಚಾಯಿತಿ ಆವರಣದಲ್ಲಿ ಹನಗೋಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಆಯೋಜಿಸಿದ್ದ ಜೋಗ್ರೇಂದ್ರನಾಥ್ ಅವರ ಅಭಿನಂದನಾ ಸಮಾರಂಭದಲ್ಲಿ ಡಾ.ಜೋಗೇಂದ್ರನಾಥ್ ದಂಪತಿ ಸನ್ಮಾನಿಸಿ ಮಾತನಾಡಿದ ಅವರು, ಕಾಡಂಚಿನಲ್ಲಿ ಡಾ.ಜೋಗೇಂದ್ರನಾಥ್ ಅವರು ಸೇವೆ ಸಲ್ಲಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಜೋಗೇಂದ್ರನಾಥ್, ರೋಗಿಗಳ ಸೇವೆ ಮಾಡಿದ್ದೇನೆಂಬ ಆತ್ಮತೃಪ್ತಿ ಇದೆ ಎಂದರು.

ಬೇರೆಡೆಗೆ ವರ್ಗಾವಣೆಗೊಂಡ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜು, ಗ್ರಾಮದ ಮುಖಂಡರಾದ ಎಳನೀರುನಂಜಪ್ಪ, ಮರೀಗೌಡ, ಶಫಿಉಲ್ಲಾ ಅವರನ್ನು ಶಾಸಕರು ಸನ್ಮಾನಿಸಿದರು.

ಗ್ರಾಪಂ ಅಧ್ಯಕ್ಷ ಚನ್ನಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪುಟ್ಟಸ್ವಾಮಿ, ಎಚ್.ಆರ್.ರಮೇಶ್, ಕಿರಂಗೂರು ಬಸವರಾಜು, ಎಚ್.ಎಸ್.ವೆಂಕಟಪ್ಪ, ಹನಗೋಡುಮಂಜುನಾಥ್, ದಾ.ರಾ.ಮಹೇಶ್, ಛಾಯಾನಾಗೇಗೌಡ, ಕೆ.ಗಣಪತಿ, ದೊಡ್ಡಹೆಜ್ಜೂರು ನಾಗೇಶ್, ಚಂದ್ರಶೇಖರ್, ಕಣಗಾಲುಮಲ್ಲೇಶ, ಹೊನ್ನೇನಹಳ್ಳಿ ವಸಂತ, ರಮೇಶ್, ಜಿ.ಪಂ.ಮಾಜಿ ಅಧ್ಯಕ್ಷ ಸಿದ್ದಾರ್ಥ, ಅತ್ತಿಗೆ ಜಿ.ಪಂ.ಮಾಜಿ ಸದಸ್ಯೆ ಶಶಿಕಲಾ ನಾಗರಾಜ್, ಡಾ.ಜೋಗೇಂದ್ರನಾಥರ ಪುತ್ರಿ ಡಾ.ಲಿಖಿತಾಜೆ ಇತರರಿದ್ದರು.