ನ್ಯೂಸ್

ಜೈಲಿನೊಳಗೆ ಸಾಗಿಸುತ್ತಿದ್ದ ಮೊಬೈಲ್ ವಶ

ಮೈಸೂರು: ಅಗರಬತ್ತಿ ತಯಾರಿಕಾ ಕಚ್ಚಾ ಉತ್ಪನ್ನಗಳೊಂದಿಗೆ ಜೈಲಿನೊಳಗೆ ಸಾಗಿಸಲಾಗುತ್ತಿದ್ದ ಮೊಬೈಲ್ ಅನ್ನು ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹ ಆವರಣದಲ್ಲಿ ಜೈಲಿನಲ್ಲಿ ಅಗರಬತ್ತಿಯ ಪ್ಯಾಕಿಂಗ್ ಘಟಕವಿದ್ದು, ಇಲ್ಲಿನ ಕೈದಿಗಳು ಪ್ಯಾಕಿಂಗ್ ಮಾಡಿ ಕಂಪನಿಗೆ ವಾಪಸ್ ಕಳುಹಿಸುತ್ತಿದ್ದರು. ಗುರುವಾರ ಜೈಲಿಗೆ ತರಲಾದ ಕಚ್ಚಾ ವಸ್ತುಗಳನ್ನು ಭದ್ರತಾ ಪಡೆಯ ಪೊಲೀಸರು ತಪಾಸಣೆ ನಡೆಸಿದಾಗ ಮೊಬೈಲ್ ಸಿಕ್ಕಿದೆ. ಕಚ್ಚಾ ಉತ್ಪನ್ನಗಳೊಂದಿಗೆ ಮೊಬೈಲ್ ತಂದ ಗೂಡ್ಸ್ ವಾಹನದ ಚಾಲಕ ಆನಂದ್‌ನನ್ನು ಬಂಧಿಸಲಾಗಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.