ನ್ಯೂಸ್

ಜೂನ್ 24 ರಂದು ಮೈಸೂರಿನಲ್ಲಿ ವಿದ್ಯುತ್ ವ್ಯತ್ಯಯ

ಜೂನ್ 24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಸೌಥ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿoದ, ಶ್ರೀರಾಂಪುರ 2ನೇ ಹಂತ, ರಮಾಭಾಯಿನಗರ, ಮಹದೇವಪುರ, ಜಯನಗರ 1 ರಿಂದ 20 ನೇ ಕ್ರಾಸ್, ಪರಸಯ್ಯನಹುಂಡಿ, ಶಿವಪುರ, ಕುವೆಂಪುನಗರ ಕೆ ಬ್ಲಾಕ್, ಅಪೋಲೊ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು. ಚಿಕ್ಕಹರದನಹಳ್ಳಿ, ಗೊರೂರು ಗ್ರಾಮ, ಕಳಲವಾಡಿ, ಕೋಟೆಹುಂಡಿ, ಯಡಹಳ್ಳಿ, ರಾಯನಕೆರೆ, ಸರಸ್ವತಿಪುರಂ 1ನೇ ಮುಖ್ಯರಸ್ತೆ ಯಿಂದ 6ನೇ ಮುಖ್ಯರಸ್ತೆ, ಭಾಗಶಃ ಕೆ.ಜಿ.ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಚಾ.ವಿ.ಸ.ನಿ.ನಿ.ಯ, ವಿ.ವಿ ಮೊಹಲ್ಲಾ ವಿಭಾಗದ, ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.