ಕಳಸ: ಪ್ರವಾಸಿತಾಣ ಕ್ಯಾತನಮಕ್ಕಿಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಕ್ಯಾತನಮಕ್ಕಿ ಗುಡ್ಡದ ರಸ್ತೆ ದುರ್ಗಮ ಹಾಗೂ ಹೊಂಡಗುಂಡಿಗಳಿಂದ ಕೂಡಿದೆ. ಜೀಪ್ ಮತ್ತು ಪಿಕಪ್ ವಾಹನದಲ್ಲಿ ಮಾತ್ರ ಸಂಚಾರ ಮಾಡಬಹುದಾಗಿದೆ. ಇಂತಹ ರಸ್ತೆಯಲ್ಲಿ ಕಲಬುರಗಿಯ ಐವರು ಪ್ರವಾಸಿಗರು ಸ್ಥಳೀಯ ಜೀಪೊಂದರಲ್ಲಿ ಕ್ಯಾತನಮಕ್ಕಿಗೆ ಹೋಗಿದ್ದಾರೆ. ಹೋಗಿ ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕ್ಯಾತನಮಕ್ಕಿ ಹೋಗುವ ರಸ್ತೆಯಲ್ಲಿ ಜೀಪ್ ಪಲ್ಟಿಯಾದ ಬೆನ್ನಲ್ಲೇ ಗುಡ್ಡಕ್ಕೆ ಹೋಗುವ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೊಪ್ಪ ಡಿಎ್ಒ ಶಿವಶಂಕರಪ್ಪ, ಮಳೆ ಬಂದು ರಸ್ತೆ ಕೆಸರಿನಿಂದ ಕೂಡಿದೆ. ಅಲ್ಲಿ ಜೀಪ್ ಪಲ್ಟಿಯಾಗಿದೆ. ಹೀಗಾಗಿ ಮಳೆ ಕಡಿಮೆ ಆಗುವವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಟ್ರಕ್ಕಿಂಗ್ ಹೋಗುವವರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.