ನ್ಯೂಸ್

ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ೨,೯೫,೪೮೦ ಫಲಾನುಭವಿಗಳು ನೋಂದಣಿ / ಆಗಸ್ಟ್ ತಿಂಗಳಿನಲ್ಲಿ ೨,೪೩,೯೫೫ ಫಲಾನುಭವಿಗಳ ಖಾತೆಗಳಿಗೆ ೪೮,೭೯,೧೦,೦೦೦ ಹಣ ಜಮಾ

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರದ ೫ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಾದ್ಯಂತ ಸೆ.೩೦ಕ್ಕೆ ೨,೯೫,೪೮೦ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್ ತಿಂಗಳಲ್ಲಿ ನೋಂದಣಿ ಮಾಡಿಕೊಂಡಿದ್ದ ೨,೭೭,೯೩೭ ಫಲಾನುಭವಿಗಳಲ್ಲಿ ೨,೪೩,೯೫೫ ಫಲಾನುಭವಿಗಳ ಖಾತೆಗೆ ೪೮,೭೯,೧೦,೦೦೦ ರೂ.ಗಳು ಜಮಾ ಆಗಿದ್ದು, ವಿವಿಧ ಕಾರಣಗಳಿಂದ ೩೩,೯೮೨ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗದೆ ಖಜಾನೆಯಲ್ಲಿಯೇ ಉಳಿಕೆಯಾಗಿದೆ.

ಸರ್ಕಾರದಿಂದ ಫಲಾನುಭವಿಗಳಿಗಾಗಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, ೫೫,೫೮,೭೪,೦೦೦ ರೂ.ಗಳು ಇದರಲ್ಲಿ ಖರ್ಚಾಗಿರುವುದು ೪೮,೭೯,೧೦,೦೦೦ ರೂ.ಗಳು, ಉಳಿಕೆಯಾಗಿರುವ ಹಣ ೬,೭೯,೬೪,೦೦೦ ರೂ.ಗಳು ವಿವಿಧ ಕಾರಣಗಳಿಂದ ೩೩,೯೮೨ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಇದರಲ್ಲಿ ೨೭,೭೪೩ ಫಲಾನುಭವಿಗಳ ಖಾತೆಗಳಿಗೆ ಆಧಾರ್ ಮತ್ತು ಕೆ.ವೈ.ಸಿ. ಆಗದೇ ಇರುವುದರಿಂದ ಇವರುಗಳ ಖಾತೆಗಳಿಗೆ ಹಣ ಜಮಾ ಆಗಿಲ್ಲ.

ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದಿಂದ ೫೫.೫ ಕೋಟಿ ಹಣ ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾಗಿದ್ದು, ೧.೧೩ ಲಕ್ಷ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಜಿಲ್ಲಾ ಪಂಚಾಯತ್ ಸಿ.ಇ.ಓ. ಸಹಿ ಹಾಕಿ ಪಟ್ಟಿಯನ್ನು ಖಜಾನೆಗೆ ಕಳುಹಿಸಿಕೊಡಲಾಗಿದ್ದು, ಉಳಿದ ೧,೨೯,೮೭೭ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಗುರುವಾರ ಜಿಲ್ಲಾ ಪಂಚಾಯತ್ ಸಿ.ಇ.ಓ. ಅವರ ಸಹಿ ಆಗಲಿದ್ದು, ಖಜಾನೆಗೆ ಕಳುಹಿಸಿಕೊಡಲು ಸಿದ್ಧವಾಗಿದೆ.

ಆಗಸ್ಟ್ ತಿಂಗಳಿನಲ್ಲಿ ನೋಂದಣಿ ಮಾಡಿಕೊಂಡಿದ್ದ ಫಲಾನುಭವಿಗಳಿಗಿಂತ ಸೆಪ್ಟೆಂಬರ್ ತಿಂಗಳಿನಲ್ಲಿ ೧೭,೫೪೩ ಫಲಾನುಭವಿಗಳು ಹೆಚ್ಚಾಗಿ ನೊಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಫಲಾನುಭವಿಗಳು ಇನ್ನೂ ಇದ್ದು, ಕೆಲವರಿಗೆ ಯಾವ ರೀತಿ ನೋಂದಣಿ ಮಾಡಿಕೊಳ್ಳಬೇಕು ಎಂಬುವುದು ತಿಳಿಯದೇ ಅನೇಕರು ಹಾಗೆಯೇ ಉಳಿದಿದ್ದಾರೆ.

ನೋಂದಣಿ ಮಾಡಿಕೊಳ್ಳಲು ಈಗಲೂ ಅವಕಾಶವಿದೆ.
ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕಾಗಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಒನ್ ಕೇಂದ್ರಗಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರಾರಂಭದಲ್ಲಿ ಸರ್ವರ್ ಪ್ರಾಬ್ಲಮ್ ಫಲಾನುಭವಿಗಳನ್ನು ಕಾಡುತ್ತಿತ್ತು. ಈಗ ಗ್ರಾಮಒನ್ ಕೇಂದ್ರಗಳಲ್ಲಿ ಕೇಂದ್ರಗಳಲ್ಲಿ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ನೂಕುನುಗ್ಗುಲು ಇಲ್ಲದೇ ಇರುವುದರಿಂದ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ.

ಪಡಿತರ ಚೀಟಿ ತಿದ್ದುಪಡಿ ಆಗದೇ ತೊಂದರೆ
ಮನೆಯ ಯಜಮಾನರ ಹೆಸರು ಪಡಿತರ ಚೀಟಿಯಲ್ಲಿ ಇದ್ದ ಕಾರಣ ಕೆಲವರಿಗೆ ನೋಂದಣಿಗೆ ಅವಕಾಶಕ್ಕೆ ಹಿನ್ನೆಡೆಯಾಗಿದೆ. ಈಗ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದರಿಂದ ಮನೆಯ ಯಜಮಾನನ ಹೆಸರನ್ನು ತೆಗೆದು ಒಡತಿಯ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಮುಂದಿನ ತಿಂಗಳು ಫಲಾನುಭವಿಗಳ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆ ಇದೆ.

ಕೋಟ್
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಕೆ.ವೈ.ಸಿ. ಜೋಡಣೆ ಮಾಡಿದ್ದರೆ ಅಂಥವರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಕೆಲವರು ನಾಲ್ಕೆöÊದು ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದು ಅವು ನಿಷ್ಕಿçಯಗೊಂಡಿರುತ್ತವೆ. ಅಂತಹ ಖಾತೆಗಳಿಗೂ ಹಣ ಜಮಾ ಆಗಿರುತ್ತದೆ. ಅಂಥಹವರು ಬ್ಯಾಂಕ್‌ಗಳಿಗೆ ಹೋಗಿ ವಿಚಾರಣೆ ನಡೆಸಿ, ಬ್ಯಾಂಕ್ ಖಾತೆಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು.

-ಮುದ್ದಣ್ಣ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.